ಬುಧವಾರ, ಆಗಸ್ಟ್ 4, 2021
28 °C

ರಾಜ್ಯಗಳಿಗೆ 21,392 ಟನ್‌ ಆಮ್ಲಜನಕ ಪೂರೈಸಿದ ರೈಲ್ವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಾದ್ಯಂತ ಏಪ್ರಿಲ್‌ 19ರಿಂದ 313 ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ರೈಲುಗಳ ಮೂಲಕ ವಿವಿಧ ರಾಜ್ಯಗಳಿಗೆ 21,392 ಟನ್‌ಗಳಷ್ಟು ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು (ಎಲ್‌ಎಂಒ) ಪೂರೈಸಲಾಗಿದೆ.

ಇದುವರೆಗೆ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ನ 1274 ಟ್ಯಾಂಕರ್‌ಗಳ ಮೂಲಕ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಪೂರೈಸುವ ಮೂಲಕ 15 ರಾಜ್ಯಗಳಲ್ಲಿನ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗಿದೆ. ಹರಿಯಾಣ ಮತ್ತು ಕರ್ನಾಟಕಕ್ಕೆ ತಲಾ ಎರಡು ಸಾವಿರ ಟನ್‌ಗಳಿಗೂ ಹೆಚ್ಚು ಆಮ್ಲಜನಕವನ್ನು ಪೂರೈಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

ದೇಶದಲ್ಲಿ ಇದುವರೆಗೆ 15 ರಾಜ್ಯಗಳಲ್ಲಿನ ಸುಮಾರು 39 ನಗರಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ತಲುಪಿಸಲಾಗಿದೆ.

ಸುಗಮವಾಗಿ ಆಮ್ಲಜನಕ ಪೂರೈಸಲು ಭಾರತೀಯ ರೈಲ್ವೆ ವಿವಿಧ ಮಾರ್ಗಗಳನ್ನು ಗುರುತಿಸಿದೆ. ಯಾವುದೇ ರಾಜ್ಯಕ್ಕೆ ತುರ್ತು ಅಗತ್ಯವನ್ನು ಪೂರೈಸಲು ಎಲ್ಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು