ಶನಿವಾರ, ಮಾರ್ಚ್ 25, 2023
22 °C

ಸಿನಿಮಾ ಚಿತ್ರೀಕರಣ: ಏಕಗವಾಕ್ಷಿ ಆನ್‌ಲೈನ್ ವ್ಯವಸ್ಥೆಗೆ ಅನುಮತಿ ನೀಡಿದ ರೈಲ್ವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತೀಯ ರೈಲ್ವೆ ಮಂಡಳಿಯು ತನ್ನ ನಿಲ್ದಾಣಗಳ ಆವರಣದಲ್ಲಿ ಸಿನಿಮಾ ಚಿತ್ರೀಕರಣಕ್ಕಾಗಿ ಅನುಮತಿ ನೀಡಲು ಏಕಗವಾಕ್ಷಿ ಆನ್‌ಲೈನ್ ವ್ಯವಸ್ಥೆಯನ್ನು ರೂಪಿಸಿದೆ.

ಇದಕ್ಕಾಗಿ ರೈಲ್ವೆ ಮಂಡಳಿಯು ಫಿಲ್ಮ್ ಫೆಸಿಲಿಟೇಷನ್ ಕಚೇರಿ (ಎಫ್‌ಎಫ್‌ಒ) ಅನ್ನು ಸ್ಥಾಪಿಸಿದ್ದು, ಇದಕ್ಕಾಗಿ www.ffo.gov.in ಎನ್ನುವ ಪ್ರತ್ಯೇಕ ವೆಬ್ ಪೋರ್ಟಲ್ ಅನ್ನೂ ರೂಪಿಸಿದೆ.

‘ಚಲನಚಿತ್ರ ನಿರ್ಮಾಪಕರು ಒಂದಕ್ಕಿಂತ ಹೆಚ್ಚು ವಲಯ ರೈಲ್ವೆ ವ್ಯಾಪ್ತಿಯಲ್ಲಿ ಬರುವ ವಿವಿಧ ರೈಲ್ವೆ ಸ್ಥಳಗಳಲ್ಲಿ ಚಿತ್ರೀಕರಣಕ್ಕಾಗಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದು. ನಂತರ, ವಲಯ ರೈಲ್ವೆಯ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಮತ್ತು ಅವರು ಅರ್ಜಿಗಳನ್ನು ‌ಪರಿಶೀಲಿಸುತ್ತಾರೆ. ನಂತರ ಅನುಮತಿ ನೀಡಲಾಗುವುದು’ ಎಂದು ರೈಲ್ವೆ ಮಂಡಳಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಹಿಂದೆ ಸಿನಿಮಾಗಳ ಚಿತ್ರೀಕರಣಕ್ಕಾಗಿ ಚಲನಚಿತ್ರ ನಿರ್ಮಾಪಕರು 17 ವಲಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮತ್ತು ರೈಲ್ವೆ ಮಂಡಳಿಗೆ ಅರ್ಜಿಗಳನ್ನು ಸಲ್ಲಿಸಿ ಅನುಮತಿ ಪಡೆಯಬೇಕಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು