ಮಂಗಳವಾರ, ನವೆಂಬರ್ 30, 2021
21 °C

ಮುಂಗಾರು ಹಿಂದಕ್ಕೆ: 26ಕ್ಕೆ ಹಿಂಗಾರು ಪ್ರವೇಶ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಗಾರು ಮಳೆ ಮಾರುತಗಳು ಇದೇ 26ರ ಹೊತ್ತಿಗೆ ಇಡೀ ದೇಶದಿಂದ ಹಿಂದಕ್ಕೆ ಸರಿಯಬಹುದು. ಇದರಿಂದಾಗಿ ಹಿಂಗಾರು ಮಾರುತಕ್ಕೆ ಅವಕಾಶ ಆಗಲಿದೆ ಎಂದು ಹವಾಮಾನ ಇಲಾಖೆ ಬುಧವಾರ ಹೇಳಿದೆ.

ಈ ಬಾರಿ ಮುಂಗಾರು ಮಾರುತಗಳ ಹಿಂದೆ ಸರಿಯುವಿಕೆ ಪ್ರಕ್ರಿಯೆಯು ವಿಳಂಬವಾಗಿತ್ತು. ಮುಂಗಾರು ಮಾರುತಗಳು ದೇಶದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿದ್ದ ಕಾರಣ ಹಲವೆಡೆ ಮಳೆಯೂ ಆಗಿದೆ. ಪ್ರಸ್ತುತ ಮುಂಗಾರು ಮಾರುತವು ಕೊಹಿಮಾ, ಸಿಲ್ಚಾರ್‌, ಕೃಷ್ಣನಗರ, ಬರಿಪಾಡ, ಮಲ್ಕನ್‌ಗಿರಿ, ನಲ್ಗೊಂಡ ಪ್ರದೇಶವನ್ನು ಹಾದು ಸಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. 

ಈಶಾನ್ಯ ಭಾರತ, ಬಂಗಾಳ ಕೊಲ್ಲಿಯ ಉತ್ತರ ಭಾಗ, ಪಶ್ಚಿಮ ಬಂಗಾಳ ಮತ್ತು ಒಡಿಶಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳು, ಕರ್ನಾಟಕದ ಕೆಲವು ಭಾಗಗಳು ಮತ್ತು ಗೋವಾ
ದಿಂದ  ಮುಂಗಾರು ಮಾರುತವು ಪೂರ್ಣವಾಗಿ ಹಿಂದಕ್ಕೆ ಸರಿಯುವುದಕ್ಕೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ. 

ಬಂಗಾಳ ಕೊಲ್ಲಿ ಮತ್ತು ಭಾರತದ ದಕ್ಷಿಣದ ತುತ್ತ ತುದಿಯತ್ತ ಈಶಾನ್ಯ ಮಾರುತ (ಹಿಂಗಾರು) ಬೀಸಲು ಆರಂಭವಾಗಲಿದೆ. ಇದೇ 26ರಿಂದಲೇ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಇಲಾಖೆ ತಿಳಿಸಿದೆ. 

ಪೂರ್ಣವಾಗಿ ತಮಿಳುನಾಡು ಮತ್ತು ಕೇರಳ, ಆಂಧ್ರ ಪ್ರದೇಶ, ಕರ್ನಾಟಕ, ಪುದುಚೇರಿ ಹಾಗೂ ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ಹಿಂಗಾರು ಮಳೆ ಸುರಿಯುತ್ತದೆ. 

ಕೇರಳ, ತಮಿಳುನಾಡು, ಪುದುಚೇರಿ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಇದೇ 24ವರೆಗೆ ಮಳೆ ಬೀಳುವ ಸಾಧ್ಯತೆ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು