ಶನಿವಾರ, ಡಿಸೆಂಬರ್ 3, 2022
21 °C

ವಿದ್ಯಾರ್ಥಿನಿ ವಿವಾಹವಾಗಲು ಲಿಂಗ ಬದಲಾಯಿಸಿಕೊಂಡ ಶಿಕ್ಷಕಿ

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜೈಪುರ: ವಿದ್ಯಾರ್ಥಿನಿಯ ಪ್ರೇಮಪಾಶಕ್ಕೆ ಸಿಲುಕಿದ ಶಿಕ್ಷಕಿಯೊಬ್ಬರು ಆಕೆಯನ್ನು ವಿವಾಹವಾಗುವುದಕ್ಕಾಗಿ ತಮ್ಮ ಲಿಂಗ ಬದಲಾಯಿಸಿಕೊಂಡಿರುವ ಘಟನೆ ರಾಜಸ್ಥಾನದ ಭರತ್‌ಪುರದಲ್ಲಿ ನಡೆದಿದೆ.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ 29 ವರ್ಷದ ಮೀರಾ, ವಿದ್ಯಾರ್ಥಿನಿ ಕಲ್ಪನಾಳನ್ನು ವಿವಾಹವಾಗುವುದಕ್ಕಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಕಳೆದ 5 ವರ್ಷದಿಂದ ಪರಸ್ಪರ ಪ್ರೀತಿಸುತ್ತಿರುವ ಮೀರಾ ಹಾಗೂ ಕಲ್ಪನಾ ಭಾನುವಾರ ವಿವಾಹ ಜೀವನಕ್ಕೆ ಕಾಲಿಟ್ಟಿದ್ದು, ಇವರ ವಿವಾಹಕ್ಕೆ ಎರಡೂ ಕುಟುಂಬದ ಸಮ್ಮತಿ ದೊರಕಿದೆ.

ಕಲ್ಪನಾ ಕಬಡ್ಡಿ ಕ್ರೀಡಾಪಟುವಾಗಿದ್ದು, ಕ್ರೀಡಾ ಜೀವನದಲ್ಲಿ ಆಕೆಯನ್ನು ಸಾಕಷ್ಟು ಪ್ರೋತ್ಸಾಹಿಸಿ ಮುನ್ನೆಲೆಗೆ ತಂದ ಮೀರಾ ಈಗ ತಮ್ಮ ಹೆಸರನ್ನು ಆರವ್‌ ಕುಂತಾಲ್ ಎಂದು ಬದಲಾಯಿಸಿಕೊಂಡಿದ್ದಾರೆ.

‘ಕಲ್ಪನಾಳನ್ನು ನೋಡಿದ ಮೇಲೆ ತಾನು ಗಂಡಾಗಿ ಜನಿಸಬೇಕಿತ್ತು ಎಂದು ಸಾಕಷ್ಟು ಬಾರಿ ಅಂದುಕೊಂಡಿದ್ದೆ. ಅದರಂತೆ ನನ್ನ ಮನದ ಇಂಗಿತವನ್ನು ಕಲ್ಪನಾಳ ಜತೆ ಹಂಚಿಕೊಂಡೆ. ಕಲ್ಪನಾ ಕೂಡ ನನ್ನ ಮನದಾಸೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ  ಲಿಂಗ ಪರಿವರ್ತನೆ ಮಾಡಿಕೊಳ್ಳಲು ಸಿದ್ಧಳಾದೆ’ ಎನ್ನುತ್ತಾರೆ ಮೀರಾ.

‘ಲಿಂಗ ಪರಿವರ್ತನೆಗೆ ಸಂಬಂಧಿಸಿದಂತೆ ಸಾಕಷ್ಟು ಲೇಖನಗಳನ್ನು ಓದಿದ ನಂತರ ದೆಹಲಿಯಲ್ಲಿರುವ ವೈದ್ಯರೊಬ್ಬರ ಬಗ್ಗೆ ತಿಳಿಯಿತು. 2019ರ ಡಿಸೆಂಬರ್‌ 25ರಂದು ಮೊದಲ ಶಸ್ತ್ರಚಿಕಿತ್ಸೆಗೆ ಒಳಗಾದೆ. ನಂತರ 2021ರ ಡಿಸೆಂಬರ್‌ನಲ್ಲಿ ಇನ್ನೊಮ್ಮೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ನನ್ನ ಶಸ್ತ್ರಚಿಕಿತ್ಸೆಗೆ ಕಲ್ಪನಾಳ ಅನುಮತಿಯೂ ಇತ್ತು’ ಎನ್ನುತ್ತಾರೆ ಮೀರಾ.

ಬಾಲ್ಯದಿಂದಲೂ ಹುಡುಗನಂತೆ ಇರುತ್ತಿದ್ದ ಮೀರಾಗೆ, ಆಕೆಯ ಸಹೋದರಿಯರು ರಾಖಿ ಕಟ್ಟಿ ಸಂಭ್ರಮಿಸುತ್ತಿದ್ದರು ಎನ್ನುತ್ತಾರೆ ಮೀರಾ ತಂದೆ ಬಿರಿ ಸಿಂಗ್‌.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.