ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಸುಗಮ ಕಲಾಪಕ್ಕೆ ಖರ್ಗೆ, ಬಂದೋಪಾಧ್ಯಾಯ ಜೊತೆ ರಾಜನಾಥ್ ಮಾತುಕತೆ ವಿಫಲ

Last Updated 2 ಆಗಸ್ಟ್ 2021, 18:26 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ಕೋರಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ತೃಣಮೂಲ ಕಾಂಗ್ರೆಸ್ ಲೋಕಸಭಾ ನಾಯಕ ಸುದೀಪ್ ಬಂದೋಪಾಧ್ಯಾಯ ಅವರ ಜೊತೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆ ಫಲ ನೀಡಿಲ್ಲ.

ಮೂಲಗಳ ಪ್ರಕಾರ, ಸಿಂಗ್ ಅವರು ಬೆಳಿಗ್ಗೆ ಖರ್ಗೆ ಮತ್ತು ಬಂದೋಪಾಧ್ಯಾಯ ಇಬ್ಬರೊಂದಿಗೂ ಮಾತನಾಡಿದ್ದಾರೆ. ಆದರೆ, ಇಬ್ಬರೂ ನಾಯಕರು ಮೊದಲು ಪೆಗಾಸಸ್ ಬಗ್ಗೆ ಚರ್ಚಿಸಬೇಕೆಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ವಿರೋಧ ಪಕ್ಷಗಳ ಸಂಸದರು ಅಗತ್ಯ ವಸ್ತುಗಳ ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ ಮತ್ತು ನಿರುದ್ಯೋಗ ಸೇರಿದಂತೆ ಪೆಗಾಸಸ್, ಕೃಷಿ ಕಾನೂನುಗಳು ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಿದ್ದು, ಪಟ್ಟು ಸಡಿಲಿಸಲು ಸಿದ್ಧರಿಲ್ಲ.

ಪೆಗಾಸಸ್ ಬಗ್ಗೆ ಚರ್ಚೆಗೆ ತೃಣಮೂಲ ಕಾಂಗ್ರೆಸ್ ಹಠ ಹಿಡಿದಿದ್ದು, ಕಾಂಗ್ರೆಸ್‌ನ ಒಂದು ಗುಂಪು ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕತೆ ಅಥವಾ ಕೃಷಿ ಕಾನೂನುಗಳನ್ನು ಚರ್ಚಿಸಲು ಅವಕಾಶ ನೀಡುವ ಮೂಲಕ ಹೆಚ್ಚು ಪ್ರಾಯೋಗಿಕ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ಆದರೆ, ಈ ವಾದವನ್ನು ವಿರೋಧಿಸಿರುವ ಕೆಲವರು ಸರ್ಕಾರ ಅಂತಹ ಸನ್ನಿವೇಶದಲ್ಲಿ ಪೆಗಾಸಸ್ ಬಗ್ಗೆ ಚರ್ಚೆ ನಡೆಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಈ ಕುರಿತಂತೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಮಹತ್ವದ ಸಭೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ಕಲಾಪದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಗಿದ್ದು, ನಂತರ ಖರ್ಗೆ ಅವರು ಪೆಗಾಸಸ್ ಬಗ್ಗೆ ಮೊದಲು ಚರ್ಚಿಸಬೇಕೆಂದು ರಾಜನಾಥ್ ಸಿಂಗ್ ಅವರಿಗೆ ತಿಳಿಸಿದ್ದಾರೆ. ಜೊತೆಗೆ, ಈ ಚರ್ಚೆ ವೇಳೆ, ಪ್ರಧಾನಿ ಅಥವಾ ಗೃಹ ಸಚಿವರು ಕಲಾಪದಲ್ಲಿ ಇರಬೇಕು ಎಂದು ತಿಳಿಸಿರುವುದಾಗಿ ತಿಳಿದುಬಂದಿದೆ.

ಉಳಿದ ಇತರೆ ಎರಡು ವಿಷಯಗಳಲ್ಲಿ ಯಾವುದರ ಬಗ್ಗೆ ಮೊದಲು ಚರ್ಚಿಸಬೇಕೆಂಬ ನಿರ್ಧಾರವನ್ನು ವಿಪಕ್ಷಗಳು ಸರ್ಕಾರಕ್ಕೆ ಬಿಟ್ಟಿವೆ. ಯಾವ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕೆಂಬ ವಿವರವನ್ನು ಪ್ರತಿಪಕ್ಷಗಳು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಲು ಬಯಸಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT