ಮಂಗಳವಾರ, ಮಾರ್ಚ್ 21, 2023
30 °C

ಬರ್ಮಾರ್‌ ಹೆದ್ದಾರಿಯಲ್ಲಿ ಯುದ್ಧವಿಮಾನ ತುರ್ತು ಭೂಸ್ಪರ್ಶ ನೆಲೆ ಇಂದು ಉದ್ಘಾಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಸ್ಥಾನದ ಬರ್ಮಾರ್‌ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ 925 ಎ ರಲ್ಲಿ ನಿರ್ಮಿಸಿರುವ ತುರ್ತು ವಿಮಾನ ಭೂಸ್ಪರ್ಶ ನೆಲೆಯನ್ನು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಗುರುವಾರ ಉದ್ಘಾಟಿಸಲಿದ್ದಾರೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ (ಇಎಲ್‌ಎಫ್‌) 3 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಭಾರತಮಾಲಾ ಪರಿಯೋಜನಾ ಅಡಿ ₹765.52 ಕೋಟಿ ವೆಚ್ಚದಲ್ಲಿ ಗಗರಿಯಾ-ಭಕಾಸರ್ ಮತ್ತು ಸತ್ತ-ಗಾಂಧವ್ ವಿಭಾಗದ ದ್ವಿಪಥದ ಒಟ್ಟು 196.97 ಕಿ.ಮೀ. ಉದ್ದನೆಯ ರಸ್ತೆಯನ್ನು ನಿರ್ಮಿಸಲಾಗಿದೆ. ಇಎಲ್‌ಎಫ್‌ ಸೌಲಭ್ಯ ಕೂಡ ಇದರ ಭಾಗವಾಗಿದೆ.

ವಾಯುಪಡೆ, ಸೇನೆಯ ಅಗತ್ಯಕ್ಕೆ ಕುಂದನಪುರ, ಸಿಂಘಾನಿಯಾ ಮತ್ತು ಭಕಾಸರ್ ಗ್ರಾಮಗಳಲ್ಲಿ 3 ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಾಗಿದೆ. ದೇಶದ ಪಶ್ಚಿಮ ಭಾಗದ ಅಂತರರಾಷ್ಟ್ರೀಯ ಗಡಿಯಲ್ಲಿ ಭಾರತೀಯ ಸೇನೆ ಮತ್ತು ಭದ್ರತಾ ಜಾಲಕ್ಕೆ ಇದು ಬಲ ತುಂಬಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು