ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ‘ರಾಮ ಜನ್ಮ ಮಹೋತ್ಸವ’ ಆಯೋಜನೆ

Last Updated 15 ಮಾರ್ಚ್ 2023, 13:59 IST
ಅಕ್ಷರ ಗಾತ್ರ

ಅಯೋಧ್ಯೆ, ಉತ್ತರ ಪ್ರದೇಶ : ಶ್ರೀರಾಮನವಮಿ ಪ್ರಯುಕ್ತ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಇದೇ 21ರಿಂದ 30ರವರೆಗೆ ಅಯೋಧ್ಯೆಯಲ್ಲಿ ‘ರಾಮ ಜನ್ಮ ಮಹೋತ್ಸವ’ವನ್ನು ಆಯೋಜಿಸಲಿದೆ.

ಈ ಕುರಿತು ಮಂಗಳವಾರ ಸಂಜೆ ಟ್ರಸ್ಟ್‌ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಮಹೋತ್ಸವದ ಅಧಿಕೃತ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ.

‘ರನ್‌ ಫಾರ್‌ ರಾಮ’ ಓಟದ ಸ್ಪರ್ಧೆ ಸೇರಿದಂತೆ ಕುಸ್ತಿ, ಕಬಡ್ಡಿ, ದೋಣಿ ಸ್ಪರ್ಧೆ ಮತ್ತು ಸೈಕಲ್‌ ರೇಸ್‌ನಂತಹ ವಿವಿಧ ಕ್ರೀಡಾ ಸ್ಪರ್ಧೆಗಳು ಇರಲಿವೆ ಎಂದು ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಮಹೋತ್ಸವದಲ್ಲಿ ಸಂಜೆ ವೇಳೆ ಧಾರ್ಮಿಕ ಸಭೆಗಳು ನಡೆಯಲಿದ್ದು, ಇದರಲ್ಲಿ ರಾಮಚರಿತಮಾನಸದ ಕಥೆಗಳನ್ನು ಆಧರಿಸಿದ ನಾಟಕಗಳ ಪ್ರದರ್ಶನಗಳು, ಸಂಗೀತ ಕಾರ್ಯಕ್ರಮಗಳು ಇರಲಿವೆ. ಹಿಂದಿ ಕವಿಗಳ ಸಭೆಯೂ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT