ಹಿಮಾಚಲ ಪ್ರದೇಶದಲ್ಲಿ ದಾಖಲೆಯ ಶೇ 75.6 ಮತದಾನ

ನವದೆಹಲಿ: ಹಿಮಾಚಲ ಪ್ರದೇಶದ ವಿಧಾನಸಭೆಗೆ ಶನಿವಾರ ನಡೆದ ಒಂದನೇ ಹಂತದ ಚುನಾವಣೆಯಲ್ಲಿ ಶೇ.75.6ರಷ್ಟು ದಾಖಲೆಯ ಮತದಾನವಾಗಿದೆ. ಅಂಚೆ ಮತಪತ್ರಗಳು ಇನ್ನೂ ಬರುತ್ತಿದ್ದು, ಅಂಕಿ–ಅಂಶ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾನುವಾರ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು ಮತದಾನದಲ್ಲಿ ಶೇ.76.8ರಷ್ಟು ಮಹಿಳಾ ಮತದಾರರು, ಶೇ.72.4 ಪುರುಷ ಮತದಾರರು ಹಾಗೂ ಶೇ.68.4ರಷ್ಟು ತೃತೀಯ ಲಿಂಗಿ ಮತದಾನರು ತಮ್ಮ ಹಕ್ಕುಚಲಾಯಿಸಿದ್ದಾರೆ. ಮತದಾರ ಪಟ್ಟಿಯಲ್ಲಿ ಒಟ್ಟು ಪುರುಷರು 27.88 ಲಕ್ಷ, ಮಹಿಳೆಯರು 27.36 ಲಕ್ಷ ಹಾಗೂ ತೃತೀಯಲಿಂಗಿಗಳು 38 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದರು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೀಶ್ ಗಾರ್ಗ್ ತಿಳಿಸಿದ್ದಾರೆ.
ಡೂನ್ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಶೇ.85.25ರಷ್ಟು ಮತದಾನವಾಗಿದ್ದು, ಶಿಮ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.62.53ರಷ್ಟು ಮತದಾನವಾಗಿದೆ ಎನ್ನಲಾಗಿದೆ.
2017ರ ವಿಧಾನಸಭಾ ಚುನಾವಣೆಯಲ್ಲಿ ಶೇ75.57ರಷ್ಟು ಮತದಾನವಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.