ಅಮರನಾಥ ಯಾತ್ರೆಗೆ ನೋಂದಣಿ ಆರಂಭ

ಜಮ್ಮು(ಪಿಟಿಐ): ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ದೇವಾಲಯದ ವಾರ್ಷಿಕ ಯಾತ್ರೆಗೆ ದೇಶದಾದ್ಯಂತ ಸೋಮವಾರದಿಂದ ನೋಂದಣಿ ಆರಂಭವಾಗಿದ್ದು, ನೂರಾರು ಭಕ್ತಾದಿಗಳಲ್ಲಿ ಉತ್ಸಾಹದಿಂದ ನೋಂದಾಯಿಸಿಕೊಂಡರು.
43 ದಿನಗಳ ಯಾತ್ರೆ ಜೂನ್ 30ರಿಂದ ಆರಂಭಗೊಳ್ಳಲಿದ್ದು, ಎರಡು ಮಾರ್ಗಗಳ ಮೂಲಕ ಯಾತ್ರೆ ನಡೆಯಲಿದೆ. ಈ ಬಾರಿ ಸರ್ಕಾರ ರೆಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಮೂಲಕ ಯಾತ್ರಿಕರ ಸುರಕ್ಷತೆ ಮತ್ತು ಅವರ ಮೇಲೆ ನಿಗಾ ವಹಿಸಲು ನಿರ್ಧರಿಸಿದೆ.
ಶ್ರೀ ಅಮರನಾಥ ದೇಗುಲ ಸಮಿತಿಯು (ಎಸ್‌ಎಎಸ್‌ಬಿ) ವಾರ್ಷಿಕ ಯಾತ್ರೆಗೆ ಅನುಕೂಲ ಕಲ್ಪಿಸಲು ದೇಶದಾದ್ಯಂತ ಇರುವ 566 ಶಾಖೆಗಳಲ್ಲಿಯೂ ಯಾತ್ರಿಕರ ನೋಂದಣಿ ಆರಂಭಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.