ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವನ್ನು 5ಜಿಯುಕ್ತವಾಗಿಸಲು ಜಿಯೊ ಪ್ರಯತ್ನ: ಮುಖೇಶ್ ಅಂಬಾನಿ

ಅಕ್ಷರ ಗಾತ್ರ

ಮುಂಬೈ: ಜಿಯೊ ಕೇವಲ ಭಾರತವನ್ನು 2 ಜಿ ಮುಕ್ತವಾಗಿಸಲು ಕೆಲಸ ಮಾಡುತ್ತಿಲ್ಲ, 5 ಜಿ ಯುಕ್ತವಾಗಿಸಲು ಪ್ರಯತ್ನಿಸುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೇಡ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಎರಡನೇ ವರ್ಚುವಲ್ ವಾರ್ಷಿಕ ಸಾಮಾನ್ಯ ಸಭೆ ನಡೆಯುತ್ತಿದ್ದು, ಇದೇವೇಳೆ ಮಾತನಾಡಿರುವ ಅವರು, 5ಜಿಗೆ ತ್ವರಿತವಾಗಿ ಮತ್ತು ಯಾವಾಗ ಬೇಕಾದರೂ ಅಪ್‌ಗ್ರೇಡ್ ಮಾಡಲು ಜಿಯೊ ಅನನ್ಯವಾದ ಸ್ಥಾನದಲ್ಲಿದೆ. 5 ಜಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ನಾವು 5ಜಿ ಸಾಧನಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಲು ಜಾಗತಿಕ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ವ್ಯವಹಾರದ ಯಶಸ್ಸಿಗಿಂತ ಈ ವರ್ಷ ಕಂಪನಿಯ ಮಾನವೀಯ ಪ್ರಯತ್ನಗಳ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದರು. ಕೋವಿಡ್ -19 ಅನ್ನು ನಿಭಾಯಿಸಲು ರಿಲಯನ್ಸ್ ಫೌಂಡೇಶನ್‌ನ ಪ್ರಯತ್ನಗಳನ್ನು ನೀತಾ ಅಂಬಾನಿ ವಿವರಿಸಿದ್ದಾರೆ. ಇಶಾ ಮತ್ತು ಆಕಾಶ್ ಅಂಬಾನಿ ತಮ್ಮ ಸೇವೆಗಾಗಿ ರಿಲಯನ್ಸ್‌ನ ಮುಂಚೂಣಿ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ರಿಲಯನ್ಸ್ ರಿಟೇಲ್‌ನ 1,500 ಹೊಸ ಮಳಿಗೆಗಳು: ಮುಖೇಶ್ ಅಂಬಾನಿ

ಸವಾಲಿನ ಪರಿಸ್ಥಿತಿಗಳ ಹೊರತಾಗಿಯೂ, ರಿಲಯನ್ಸ್ ರಿಟೇಲ್ 1,500 ಹೊಸ ಮಳಿಗೆಗಳನ್ನು ಆರಂಭಿಸಿದೆ. ಇದು ಈ ಅವಧಿಯಲ್ಲಿ ಮಾಡಿದ ಅತಿದೊಡ್ಡ ಚಿಲ್ಲರೆ ವ್ಯಾಪಾರದ ವಿಸ್ತರಣೆಯಾಗಿದೆ. ಇದು ನಮ್ಮ ಮಳಿಗೆಗಳ ಸಂಖ್ಯೆಯನ್ನು 12,711 ಕ್ಕೆ ಏರಿಸಿದೆ. ನಮ್ಮ ಉಡುಪು ವ್ಯವಹಾರದಲ್ಲಿ ದಿನಕ್ಕೆ ಸುಮಾರು ಐದು ಲಕ್ಷ ಯೂನಿಟ್‌ಗಳನ್ನು ಮತ್ತು ವರ್ಷದಲ್ಲಿ 18 ಕೋಟಿ ಯೂನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ಬ್ರಿಟನ್, ಜರ್ಮನಿ ಮತ್ತು ಸ್ಪೇನ್‌ನ ಇಡೀ ಜನಸಂಖ್ಯೆಗೆ ಸಮನಾಗಿರುತ್ತದೆ ಎಂದು ಮುಖೇಶ್ ಅಂಬಾನಿ ಹೇಳಿದರು.

ಮೈಕ್ರೋಸಾಫ್ಟ್‌ನೊಂದಿಗೆ ನಾವು ಜಾಮ್‌ನಗರ ಮತ್ತು ನಾಗ್ಪುರದಲ್ಲಿ ಆರಂಭಿಕ 10 ಮೆಗಾವ್ಯಾಟ್ ಸಾಮರ್ಥ್ಯದ ಜಿಯೊ-ಅಜೂರ್ ಕ್ಲೌಡ್ ದತ್ತಾಂಶ ಕೇಂದ್ರಗಳನ್ನು ಕಾರ್ಯಗತಗೊಳಿಸಿದ್ದೇವೆಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT