ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌, ಪತಂಜಲಿ ಸೇರಿ 11 ಖಾಸಗಿ ಸಂಸ್ಥೆಗಳಿಗೆ ಸಿಐಎಸ್‌ಎಫ್‌ನಿಂದ ಭದ್ರತೆ

Last Updated 22 ಡಿಸೆಂಬರ್ 2021, 12:26 IST
ಅಕ್ಷರ ಗಾತ್ರ

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರಿ, ಟಾಟಾ ಸ್ಟೀಲ್‌, ಇನ್ಫೊಸಿಸ್ ಸೇರಿದಂತೆ 11 ಖಾಸಗಿ ಸಂಸ್ಥೆಗಳು ಹಾಗೂ 64 ವಿಮಾನ ನಿಲ್ದಾಣಗಳಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್‌) ರಕ್ಷಣೆ ಒದಗಿಸುತ್ತಿದೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಬುಧವಾರ ಹೇಳಿದ್ದಾರೆ.

‘ಬೆದರಿಕೆ ಕಾರಣ ಭದ್ರತೆಗೆ ಮತ್ತು ನಿರ್ವಹಣೆಯ ಬದ್ಧತೆಗಾಗಿ ಸಿಐಎಸ್‌ಎಫ್‌ ನಿಯೋಜನೆಯನ್ನು ಪರಿಗಣಿಸಲಾಗುತ್ತದೆ. ಪ್ರಸ್ತುತ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ 11 ಖಾಸಗಿ ಕಂಪನಿಗಳಿಗೆ ಭದ್ರತೆ ನೀಡಲು ಸಿಐಎಸ್‌ಎಫ್‌ ನಿಯೋಜಿಸಲಾಗಿದೆ’ ಎಂದು ಅವರು ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಕೈಗಾರಿಕಾ ಸಂಸ್ಥೆ, ಬೆಂಗಳೂರು, ಮೈಸೂರು ಮತ್ತು ಪುಣೆಯಲ್ಲಿರುವ ಇನ್ಫೊಸಿಸ್‌ ಸಂಸ್ಥೆ, ಹರಿದ್ವಾರದಲ್ಲಿಯ ಪತಂಜಲಿ ಆಹಾರ ಮತ್ತು ಗಿಡಮೂಲಿಕೆ ಉದ್ಯಾನ, ಮುಂಬೈನಲ್ಲಿರುವ ರಿಲಯನ್ಸ್‌ ಕಾರ್ಪೊರೇಟ್‌ ಉದ್ಯಾನ ಆವರಣ, ಜಾಮ್‌ನಗರದ ರಿಲಯನ್ಸ್‌ ಇಂಡಸ್ಟ್ರಿ, ನಯರಾ ಎಜರ್ಜಿ, ಕಳಿಂಗನಗರದ ಟಾಟಾ ಸ್ಟೀಲ್‌, ಹೈದರಾಬಾದ್‌ನ ಭಾರತ್‌ ಬಯೋಟೆಕ್‌, ಮುಂಬೈನ ಛತ್ರಪತಿ ಶಿವಾಜಿ ವಿಮಾನನಿಲ್ದಾಣದ ಹೋಟೆಲ್‌ ಟರ್ಮಿನಲ್‌ ಐಸಿಗಳಿಗೆ ಸಿಐಎಸ್‌ಎಫ್‌ ಭದ್ರತೆ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT