ಸೋಮವಾರ, ಮಾರ್ಚ್ 27, 2023
29 °C

ಕೃಷಿ ಕಾನೂನುಗಳನ್ನು ರದ್ದುಗೊಳಿಸಿ, ರೈತರಿಗೆ ಮುಕ್ತಿ ನೀಡಿ: ಮಾಯಾವತಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಪ್ರತಿಭಟನಾ ನಿರತ ರೈತರ ನಂಬಿಕೆಯನ್ನು ಗೆಲ್ಲಲು ಸರ್ಕಾರ ವಿಫಲವಾಗಿರುವಾಗ ಬಿಜೆಪಿಯ ‘ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್’ ಘೋಷಣೆಯನ್ನು ಜನರು ಏಕೆ ನಂಬಬೇಕು ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಭಾನುವಾರ ಪ್ರಶ್ನಿಸಿದ್ದಾರೆ.

'ಬಿಜೆಪಿಯವರು ‘ಸಬ್‌ ಕಾ ಸಾಥ್, ಸಬ್ ಕಾ ವಿಕಾಸ್’ ಎಂದು ಹೇಳುತ್ತಾರೆ ಆದರೆ, ದೇಶದ ರೈತರು ಇಷ್ಟು ದೀರ್ಘ ಕಾಲದಿಂದ ಮೂರು ಕೃಷಿ ಕಾನೂನುಗಳ ವಿರುದ್ಧ ತೀವ್ರವಾಗಿ ಪ್ರತಿಭಟಿಸುತ್ತಿರುವಾಗ ಮತ್ತು ಆಕ್ರೋಶಗೊಂಡಿರುವಾಗ ಜನರು ಈ ‘ಜುಮ್ಲಾ’ (ವಾಕ್ಚಾತುರ್ಯ) ವನ್ನು ಹೇಗೆ ನಂಬುತ್ತಾರೆ?' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

'ಮೂರು ವರ್ಷಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೇಗೆ ಕಡಿತಗೊಳಿಸಲಾಗಿದೆಯೋ ಅದೇ ರೀತಿ ಸರ್ಕಾರವು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುತ್ತದೆ ಮತ್ತು ದೀಪಾವಳಿ ಉಡುಗೊರೆಯಾಗಿ ರೈತರಿಗೆ ಮುಕ್ತಿ ನೀಡಲಿ ಎಂಬುದನ್ನು ಬಿಎಸ್‌ಪಿ ವರಿಷ್ಠರು ನಿರೀಕ್ಷಿಸುತ್ತಿರುವುದಾಗಿ' ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು