ಭಾನುವಾರ, ಮೇ 29, 2022
30 °C
ಜ.20ರಿಂದ ಫೆ.15ರ ವರೆಗೆ ನಿಷೇಧ ಜಾರಿಗೊಳಿಸಿ ಆದೇಶ

ಗಣರಾಜ್ಯೋತ್ಸವ: ದೆಹಲಿಯಲ್ಲಿ ವೈಮಾನಿಕ ಸಾಧನಗಳ ಹಾರಾಟ ನಿಷೇಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಗಣರಾಜ್ಯೋತ್ಸವ ಕಾರಣದಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಜ.20ರಿಂದ ‘ಮಾನವ ರಹಿತ ವೈಮಾನಿಕ ವಾಹನಗಳು’ (ಯುಎವಿ), ಪ್ಯಾರಾಗ್ಲೈಡರ್ಸ್‌ ಹಾಗೂ ಹಾಟ್‌ ಏರ್‌ ಬಲೂನ್‌ಗಳಂತಹ ವೈಮಾನಿಕ ಸಾಧನಗಳ ಹಾರಾಟ ನಡೆಸುವುದನ್ನು ನಿರ್ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. 

ಪೊಲೀಸ್ ಆಯುಕ್ತ ರಾಕೇಶ್‌ ಅಸ್ಥಾನಾ ಅವರು ಈ ಸಂಬಂಧ ಹೊರಡಿಸಿರುವ ಆದೇಶ ಫೆಬ್ರುವರಿ 15ರ ವರೆಗೆ ಜಾರಿಯಲ್ಲಿರುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕೆಲ ದುಷ್ಕರ್ಮಿಗಳು, ಸಮಾಜಘಾತುಕ ಶಕ್ತಿಗಳು ಅಥವಾ ಉಗ್ರರಿಂದ ದಾಳಿಯ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕರು, ಗಣ್ಯರು ಹಾಗೂ ಆಸ್ತಿಗಳ ಸುರಕ್ಷತೆಗೆ ಅಪಾಯವಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು