ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ಕಾವೇರಿ ಕಣಿವೆಯ ಯೋಜನೆಗಳು

Last Updated 29 ಮಾರ್ಚ್ 2021, 17:58 IST
ಅಕ್ಷರ ಗಾತ್ರ

ಕಾವೇರಿ ಮತ್ತು ಅದರ ಉಪನದಿಗಳು ಕರ್ನಾಟಕ ಮತ್ತು ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತಿವೆ. ಕಾವೇರಿ ನದಿ ಕಣಿವೆಯ ಒಟ್ಟು ಜಲಾನಯನ ಮತ್ತು ಅಚ್ಚುಕಟ್ಟು ಪ್ರದೇಶವು 87 ಸಾವಿರ ಚದರ ಕಿ.ಮೀ.ಗಿಂತಲೂ ಹೆಚ್ಚು. ಕಾವೇರಿ ಕಣಿವೆಯ ನದಿಗಳು, ಜಲಾಶಯಗಳು ಮತ್ತು ಅವುಗಳ ಉಪಯುಕ್ತತೆಯ ವಿವರ ಇಲ್ಲಿದೆ

ಕಾವೇರಿ ಕಣಿವೆಯ ಜಲಾನಯನ-ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ

87,900 ಚದರ ಕಿ.ಮೀ. ಒಟ್ಟು

48,730 ಚದರ ಕಿ.ಮೀ. ತಮಿಳುನಾಡು

36,240 ಚದರ ಕಿ.ಮೀ. ಕರ್ನಾಟಕ

2,930 ಚದರ ಕಿ.ಮೀ. ಕೇರಳ

2.7 % ದೇಶದ ಒಟ್ಟು ಭೌಗೋಳಿಕ ವಿಸ್ತೀರ್ಣದಲ್ಲಿ ಕಾವೇರಿ ಕಣಿವೆಯ ಜಲಾನಯನ–ಅಚ್ಚುಕಟ್ಟು ಪ್ರದೇಶದ ವಿಸ್ತೀರ್ಣ

1,341 ಮೀಟರ್ ಸಮುದ್ರಮಟ್ಟದಿಂದ ಕಾವೇರಿ ಉಗಮಸ್ಥಾನದ ಎತ್ತರ

805 ಕಿ.ಮೀ. ಉಗಮಸ್ಥಾನದಿಂದ ಸಮುದ್ರ ಸೇರುವವರೆಗೆ ಕಾವೇರಿ ನದಿ ಪಾತ್ರದ ಉದ್ದ

***

ನೀರಿನ ಲಭ್ಯತೆ

740 ಟಿಎಂಸಿ ಲಭ್ಯವಿರುವ ಒಟ್ಟು ನೀರು

400 ಟಿಎಂಸಿ ಕರ್ನಾಟಕದಿಂದ ಲಭ್ಯವಿರುವ ನೀರು

236 ಟಿಎಂಸಿ ತಮಿಳುನಾಡಿನಿಂದ ಲಭ್ಯವಿರುವ ನೀರು

104 ಟಿಎಂಸಿ ಕೇರಳದಿಂದ ಲಭ್ಯವಿರುವ ನೀರು

----------------

ಕಾವೇರಿ ಜಲಾನಯನ ಪ್ರದೇಶದ ‘ಪ್ರಮುಖ ಯೋಜನೆಗಳು’

#ಕೃಷ್ಣರಾಜಸಾಗರ/ಕೆಆರ್‌ಎಸ್‌

–ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕನ್ನಂಬಾಡಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ

–ನೀರಿನ ಲಭ್ಯತೆ ಪ್ರಮಾಣ;45.05 ಟಿಎಂಸಿ ಅಡಿ

ಉದ್ದೇಶ: ನೀರಾವರಿ, ವಿದ್ಯುತ್, ಕುಡಿಯುವ ನೀರು

ಜಲಾನಯನ ಪ್ರದೇಶ;10,619 ಚ.ಕಿ.ಮೀ.

ಅಚ್ಚುಕಟ್ಟು ಪ್ರದೇಶ;79,312 ಹೆಕ್ಟೇರ್

#ಹಾರಂಗಿ ಜಲಾಶಯ

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕು ಹುಲುಗುಂದದಲ್ಲಿ ಜಲಾಶಯ

ನೀರಿನ ಲಭ್ಯತೆ ಪ್ರಮಾಣ: 18 ಟಿಎಂಸಿ ಅಡಿ

ಉದ್ದೇಶ: ನೀರಾವರಿ

ನೀರಾವರಿ ಸೌಲಭ್ಯ;ಮೈಸೂರು ಜಿಲ್ಲೆಯ ಹುಣಸೂರು, ಕೆ.ಆರ್‌.ನಗರ, ಪಿರಿಯಾಪಟ್ಟಣ ಹಾಗೂ ಹಾಸನ ಜಿಲ್ಲೆಯ ಅರಕಲಗೂಡು, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕುಗಳು

ಜಲಾನಯನ ಪ್ರದೇಶ;717 ಚ.ಕಿ.ಮೀ.

ಅಚ್ಚುಕಟ್ಟು ಪ್ರದೇಶ;54,591 ಹೆಕ್ಟೇರ್

#ಗೊರೂರು ಜಲಾಶಯ

ಹೇಮಾವತಿ ನದಿ

ಉಗಮ ಸ್ಥಾನ; ಬಲ್ಲಾಳರಾಯನದುರ್ಗ

ಉದ್ದ:245 ಕಿ.ಮೀ.

ಜಲಾಶಯ:ಹಾಸನ ಜಿಲ್ಲೆಯ ಗೊರೂರು

ನೀರಿನ ಲಭ್ಯತೆ ಪ್ರಮಾಣ;56.67 ಟಿಎಂಸಿ ಅಡಿ

ಉದ್ದೇಶ:ನೀರಾವರಿ

ನೀರಾವರಿ ಸೌಲಭ್ಯ;ಹಾಸನ ಜಿಲ್ಲೆಯ ಹಾಸನ, ಅರಕಲಗೂಡು, ಹೊಳೆನರಸೀಪುರ, ಚೆನ್ನರಾಯಪಟ್ಟಣ, ಮಂಡ್ಯ ಜಿಲ್ಲೆಯ ಮಂಡ್ಯ, ಕೆ.ಆರ್‌.ಪೇಟೆ, ಪಾಂಡವಪುರ, ನಾಗಮಂಗಲ, ಮೈಸೂರು ಜಿಲ್ಲೆಯ ಕೆ.ಆರ್‌.ನಗರ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕುಗಳು

ಜಲಾನಯನ ಪ್ರದೇಶ;5,410 ಚ.ಕಿ.ಮೀ.

ಅಚ್ಚುಕಟ್ಟು ಪ್ರದೇಶ;2.91 ಲಕ್ಷ ಹೆಕ್ಟೇರ್

#ಕಬಿನಿ ಜಲಾಶಯ

ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು ಬೀಚನಹಳ್ಳಿಯಲ್ಲಿ ಕಬಿನಿ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ

ನೀರಿನ ಲಭ್ಯತೆ ಪ್ರಮಾಣ;59.65 ಟಿಎಂಸಿ ಅಡಿ

ಉದ್ದೇಶ:ನೀರಾವರಿ

ನೀರಾವರಿ ಸೌಲಭ್ಯ;ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ, ನಂಜನಗೂಡು, ಟಿ.ನರಸೀಪುರ ಮತ್ತು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳು

ಜಲಾನಯನ ಪ್ರದೇಶ;7,040 ಚ.ಕಿ.ಮೀ.

ಅಚ್ಚುಕಟ್ಟು ಪ್ರದೇಶ;94,434 ಹೆಕ್ಟೇರ್

ಇತರ ನೀರಾವರಿ ಯೋಜನೆಗಳು

ತಾರಕ ಯೋಜನೆ, ಅರ್ಕಾವತಿ ಯೋಜನೆ, ತಿಪ್ಪಗೊಂಡನಹಳ್ಳಿ ಯೋಜನೆ, ಚಿಕ್ಲಿಹೊಳೆ ಯೋಜನೆ, ಉಡುತೊರೆಹಳ್ಳಿ ಯೋಜನೆ, ಇಗ್ಗಲೂರು ಬ್ಯಾರೇಜ್ ಯೋಜನೆ, ಮಂಚನಬೆಲೆ ಯೋಜನೆ, ಹುಲಿಕೆರೆ ಸುರಂಗ ಯೋಜನೆ, ನಂಜಾಪುರ ಏತ ನೀರಾವರಿ ಯೋಜನೆ, ಬನ್ನಹಳ್ಳಿಹುಂಡಿ ಏತ ನೀರಾವರಿ ಯೋಜನೆ, ಯಗಚಿ ಯೋಜನೆ, ವಾಟೆಹೊಳೆ ಯೋಜನೆ ಇತ್ಯಾದಿ.

–––––––

ತಮಿಳುನಾಡಿನಲ್ಲಿರುವ ಕಾವೇರಿ ಜಲಾನಯನದ ಪ್ರದೇಶದ ಯೋಜನೆಗಳು

#ಮೆಟ್ಟೂರು ಜಲಾಶಯ

ಸ್ಥಳ:ಸೇಲಂ ಜಿಲ್ಲೆಯ ಮೆಟ್ಟೂರು (ಕಾವೇರಿ ನದಿ)

ನೀರಿನ ಲಭ್ಯತೆ ಪ್ರಮಾಣ;93.47 ಟಿಎಂಸಿ ಅಡಿ

ಉದ್ದೇಶ:ನೀರಾವರಿ, ವಿದ್ಯುತ್, ಕುಡಿಯುವ ನೀರು

ಜಲಾನಯನ ಪ್ರದೇಶ;15,700 ಚದರ ಮೈಲಿ

ಅಚ್ಚುಕಟ್ಟು ಪ್ರದೇಶ;13 ಲಕ್ಷ ಎಕರೆ

#ಭವಾನಿಸಾಗರ ಜಲಾಶಯ

ಸ್ಥಳ:ಈರೋಡು ಜಿಲ್ಲೆ (ಭವಾನಿ ನದಿ)

ನೀರಿನ ಲಭ್ಯತೆ ಪ್ರಮಾಣ;32.800 ಟಿಎಂಸಿ ಅಡಿ

ಉದ್ದೇಶ:ನೀರಾವರಿ, ವಿದ್ಯುತ್

ಜಲಾನಯನ ಪ್ರದೇಶ;992 ಚ.ಕಿ.ಮೀ.

#ಕಲನೈ ಅಣೆಕಟ್ಟು (ಗ್ರಾಂಡ್)

ಸ್ಥಳ: ತಂಜಾವೂರು ಜಿಲ್ಲೆ (ಕಾವೇರಿ ನದಿ)

ನೀರಿನ ಲಭ್ಯತೆ ಪ್ರಮಾಣ;

ಉದ್ದೇಶ:ನೀರಾವರಿ

ಜಲಾನಯನ ಪ್ರದೇಶ;

ಅಚ್ಚುಕಟ್ಟು ಪ್ರದೇಶ;4 ಲಕ್ಷ ಹೆಕ್ಟೇರ್

ಆಧಾರ: ಕಾವೇರಿ ನೀರಾವರಿ ನಿಗಮ, ಜಲಸಂಪನ್ಮೂಲ ಇಲಾಖೆಯ ವಾರ್ಷಿಕ ವರದಿ, ಕೇಂದ್ರ ಜಲ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT