ರಾಮನ ಜತೆಗೆ ‘ರೊಟ್ಟಿ’ಯೂ ಬೇಕು: ದತ್ತಾತ್ರೇಯ ಹೊಸಬಾಳೆ

ಭೋಪಾಲ್: ಭಗವಾನ್ ರಾಮನ ಜತೆಗೆ ‘ರೊಟ್ಟಿ’ ಅಂದರೆ ಕೈಗಾರಿಕೆಗಳು, ಸಂಪತ್ತು ಮತ್ತು ಉದ್ಯೋಗಗಳೂ ದೇಶಕ್ಕೆ ಬೇಕಾಗಿದ್ದು ಎರಡೂ ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುವಂಥವು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೋಮವಾರ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಮಧ್ಯಭಾರತ ಪ್ರಾಂತದಲ್ಲಿ (ಕೇಂದ್ರ ಭಾರತ) ಸ್ಥಾಪಿಸಲಾದ 16 ಉದ್ಯೋಗ ಸೃಷ್ಟಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದ ಹೆಮ್ಮೆ ಮತ್ತು ಸಂಸ್ಕೃತಿಗಾಗಿ, ಅಯೋಧ್ಯೆಯಲ್ಲಿ ರಾಮನಿಗೆ ಮಂದಿರವನ್ನು ನಿರ್ಮಿಸಬೇಕು ಎಂಬ ಭಾವನೆ ದೇಶದ ಜನರ ಆಶಯವಾಗಿತ್ತು. ಪ್ರತಿ ಪಥದಲ್ಲೂ ದೇವಾಲಯಗಳಿವೆ. ಆದರೆ ದೇಶದ ಜನರು ಅಯೋಧ್ಯೆಯಲ್ಲೇ ರಾಮಮಂದಿರ ಕಟ್ಟಬೇಕೆಂಬ ಆಕಾಂಕ್ಷೆ ಹೊಂದಿದ್ದರು. ಏಕೆಂದರೆ ಅದು ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಭಾವನೆಯಾಗಿತ್ತು’ ಎಂದು ಅವರು ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಮಧ್ಯಕ್ಷೇತ್ರವು ಮಧ್ಯಭಾರತ, ಮಾಳ್ವಾ, ಮಹಾಕೋಶಲ್ ಮತ್ತು ಛತ್ತೀಸಗಢ ಪ್ರಾಂತ್ಯವನ್ನೊಳಗೊಂಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.