ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ಐನ್ನು ಕೂಡಲೇ ನಿಷೇಧಿಸಲು ಆರ್‌ಎಸ್‌ಎಸ್‌ ಮುಸ್ಲಿಂ ವಿಭಾಗ ಆಗ್ರಹ

Last Updated 26 ಸೆಪ್ಟೆಂಬರ್ 2022, 2:53 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಪಾಫುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಮೇಲೆ ಎನ್‌ಐಎ ದಾಳಿ ಬೆನ್ನಲ್ಲೇ ಆ ಸಂಘಟನೆಯ ನಿಷೇಧಕ್ಕೆ ಒತ್ತಾಯಗಳು ಕೇಳಿ ಬಂದಿವೆ.

ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಸ್ಲಿಂ ಘಟಕವಾಗಿರುವ ‘ಮುಸ್ಲಿಂ ರಾಷ್ಟ್ರೀಯ ಮಂಚ್’ ಪಿಎಫ್‌ಐನ್ನು ತಕ್ಷಣವೇ ನಿಷೇಧಿಸಬೇಕು ಎಂದು ಆಗ್ರಹ ಮಾಡಿದೆ. ಭಾನುವಾರ ನಡೆದ ಮಂಚ್‌ನ ಸಭೆಯಲ್ಲಿ ಈ ಆಗ್ರಹವನ್ನು ಮಂಚ್ ಮಾಡಿದೆ.

ಪಿಎಫ್‌ಐ ಅಪಾಯಕಾರಿ ಸಂಘಟನೆಯಾಗಿದೆಯೆಂದರೆ ಕೇಂದ್ರ ಸರ್ಕಾರ ಇದುವರೆಗೆ ಅದನ್ನು ಏಕೆ ನಿಷೇಧ ಮಾಡಿಲ್ಲ? ಆ ಸಂಘಟನೆಯ ಬ್ಯಾಂಕ್‌ ಖಾತೆಗಳನ್ನು ಏಕೆ ಮುಟ್ಟುಗೋಲು ಹಾಕಿಕೊಂಡಿಲ್ಲ? ಆಸ್ತಿಗಳನ್ನು ಏಕೆ ವಶಪಡಿಸಿಕೊಂಡಿಲ್ಲ? ಆ ಸಂಘಟನೆಯ ಮುಖಂಡರ ಮೇಲೆ ಏಕೆ ಇದುವರೆಗೆ ಕ್ರಮ ಕೈಗೊಂಡಿಲ್ಲ? ಎಂದು ಮಂಚ್‌ನ ಮುಖಂಡರು ಪ್ರಶ್ನಿಸಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಮಂಚ್‌ನ ರಾಷ್ಟ್ರೀಯ ಸಂಚಾಲಕ ಶಾಹೀದ್ ಅಖ್ತರ್, ‘ಪಿಎಫ್‌ಐ ಸೀಮಿ ಉಗ್ರ ಸಂಘಟನೆಗಳಿಗಿಂತಲೂ ಅಪಾಯಕಾರಿಯಾಗಿದೆ. ಕೂಡಲೇ ಕೇಂದ್ರ ಸರ್ಕಾರ ಈ ಸಂಘಟನೆಯನ್ನು ದೇಶದಾದ್ಯಂತ ನಿಷೇಧ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಮಂಚ್‌ನ ಮಾಧ್ಯಮ ವಕ್ತಾರ ಶಾಹೀದ್ ಸಯ್ಯದ್ ಅವರು, ‘ಪಿಎಫ್‌ಐ ದೇಶವಿರೋಧಿ ಕೃತ್ಯಗಳನ್ನು ಮಾಡುತ್ತಿರುವುದು ಎನ್‌ಐಎ ದಾಳಿಯಿಂದ ಬಹಿರಂಗವಾಗಿದೆ. ಆ ಸಂಘಟನೆಯ ಸದಸ್ಯರು ಬಹಿರಂಗವಾಗಿಯೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗುತ್ತಿದ್ದಾರೆ. ಹೀಗಾಗಿ ಆ ಸಂಘಟನೆಯನ್ನು ನಿಷೇಧ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT