ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಿಂದ ಭಾರತೀಯರ ಕರೆತರಲು ಏರ್‌ ಇಂಡಿಯಾದಿಂದ 2 ವಿಮಾನಗಳ ಸಂಚಾರ

Last Updated 25 ಫೆಬ್ರುವರಿ 2022, 12:57 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ನಲ್ಲಿ ಅತಂತ್ರರಾಗಿರುವ ಭಾರತೀಯರನ್ನು ಕರೆತರಲು ಏರ್ ಇಂಡಿಯಾ ರೊಮಾನಿಯಾದ ರಾಜಧಾನಿ ಬುಚರೆಸ್ಟ್‌ಗೆ ಎರಡು ವಿಮಾನಗಳ ಸಂಚಾರ ನಡೆಸಲಿದೆ.

ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ. ರಸ್ತೆಯ ಮೂಲಕ ಉಕ್ರೇನ್‌–ರೊಮಾನಿಯಾ ಗಡಿಯನ್ನು ತಲುಪಿರುವ ಭಾರತೀಯರನ್ನು ಅಲ್ಲಿಂದ, ಅಧಿಕಾರಿಗಳು ಬುಚರೆಸ್ಟ್‌ಗೆ ಕರೆತರಲಿದ್ದಾರೆ. ಅಲ್ಲಿಂದ ತದನಂತರ ಅವರನ್ನು ವಿಮಾನದಲ್ಲಿ ಕರೆತರಲಾಗುವುದು ಎಂದು ವಿವರಿಸಿದ್ದಾರೆ.

ನಾಗರಿಕ ವಿಮಾನಗಳ ಸಂಚಾರಕ್ಕೆ ಉಕ್ರೇನ್‌ನ ವಾಯುಮಾರ್ಗವನ್ನು ಬಂದ್‌ ಮಾಡಲಾಗಿದೆ. ಈ ಕಾರಣದಿಂದ ಬುಚರೆಸ್ಟ್‌ನಿಂದ ಭಾರತೀಯರನ್ನು ಕರೆತರಲಾಗುತ್ತಿದೆ. ಏರ್‌ ಇಂಡಿಯಾದ ಎರಡು ವಿಮಾನಗಳು ಶನಿವಾರ ನಿರ್ಗಮಿಸಲಿವೆ ಎಂದು ತಿಳಿಸಿದ್ದಾರೆ.

ಉಕ್ರೇನ್‌ನ ರಾಜಧಾನಿ ಕೀವ್‌ ಮತ್ತು ರೊಮಾನಿಯಾದ ಗಡಿ ಭಾಗದ ನಡುವಿನ ಅಂತರ ಸುಮಾರು 600 ಕಿ.ಮೀ. ರಸ್ತೆಯ ಮೂಲಕ ಈ ಅಂತರವನ್ನು ಕ್ರಮಿಸಲು ಕನಿಷ್ಠ 8 ರಿಂದ 11 ಗಂಟೆಯ ಅವಧಿ ಬೇಕಾಗುತ್ತದೆ. ಗಡಿ ಭಾಗದಿಂದ ಬುಚರೆಸ್ಟ್‌ಗೆ ಅಂತರ ಸುಮಾರು 500 ಕಿ.ಮೀ ಆಗಲಿದ್ದು, ರಸ್ತೆಯ ಮೂಲಕ ಈ ಅಂತರವನ್ನು ಕ್ರಮಿಸಲು ಸುಮಾರು 9 ಗಂಟೆ ಬೇಕಾಗಲಿದೆ ಎಂದು ವಿವರಿಸಿದ್ದಾರೆ.

ಈ ಕುರಿತಂತೆ ಏರ್‌ಇಂಡಿಯಾ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಸುಮಾರು 20 ಸಾವಿರ ಭಾರತೀಯರು, ಬಹುತೇಕ ವಿದ್ಯಾರ್ಥಿಗಳು ಯುದ್ಧಪೀಡಿತ ಉಕ್ರೇನ್‌ನಲ್ಲಿ ಅತಂತ್ರರಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT