ಮಂಗಳವಾರ, ಸೆಪ್ಟೆಂಬರ್ 22, 2020
25 °C
ವೈದ್ಯಕೀಯ ಚಿಕಿತ್ಸೆ ಕಾರಣ: ಊಹಾಪೋಹ ಹರಡದಂತೆ ಕರೆ

ನಟನೆಯಿಂದ ಕೆಲ ಕಾಲ ದೂರ: ಸಂಜಯ್‌ ದತ್‌ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವೈದ್ಯಕೀಯ ಚಿಕಿತ್ಸೆಗಾಗಿ ಸ್ವಲ್ಪ ಸಮಯ ನಟನೆಯಿಂದ ಬಿಡುವು ಪಡೆಯುವುದಾಗಿ ಬಾಲಿವುಡ್‌ ನಟ ಸಂಜಯ್‌ ದತ್‌ ಮಂಗಳವಾರ ಟ್ವೀಟ್‌ ಮುಖಾಂತರ ಹೇಳಿದ್ದಾರೆ. 

ಅಭಿಮಾನಿಗಳು ಯಾವುದೇ ತರಹದ ಊಹಾಪೋಹಗಳನ್ನು ಹರಡದಂತೆ ಇದೇ ವೇಳೆ ದತ್‌ ಕರೆ ನೀಡಿದ್ದಾರೆ. ಕಳೆದ ವಾರಾಂತ್ಯದಲ್ಲಿ ಉಸಿರಾಟದ ಸಮಸ್ಯೆಯಿಂದಾಗಿ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ದತ್‌, ಸೋಮವಾರ ಮನೆಗೆ ಮರಳಿದ್ದರು. 

‘ಶೀಘ್ರದಲ್ಲೇ ನಾನು ನಟನೆಗೆ ಮರಳಲಿದ್ದೇನೆ.ಜನರ ಪ್ರೀತಿ, ಬೆಂಬಲ ಹೀಗೇ ಇರಲಿ’ ಎಂದು ಟ್ವೀಟ್‌ನಲ್ಲಿ ಅವರು ಉಲ್ಲೇಖಿಸಿದ್ದಾರೆ. ದತ್‌ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಅವರ ಆರೋಗ್ಯದ ಕುರಿತು ಹಲವು ಗಾಳಿಸುದ್ದಿಗಳು ಹರಿದಾಡಿದ್ದವು. ದತ್‌ ಅಭಿನಯದ ‘ಸಡಕ್‌–2’ ಮತ್ತು ‘ಭುಜ್‌: ದಿ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾಗಳು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಜೊತೆಗೆ ಕನ್ನಡದ ಕೆಜಿಎಫ್‌ ಎರಡನೇ ಭಾಗ ಹಾಗೂ ‘ಶಮ್ಶೀರಾ’ದಲ್ಲಿ ರಣಬೀರ್‌‌ ಕಪೂರ್‌ ಜೊತೆಯೂ ದತ್‌ ಬಣ್ಣ ಹಚ್ಚಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು