ಸೋಮವಾರ, ಸೆಪ್ಟೆಂಬರ್ 27, 2021
28 °C

ಸರಲಾ ಠಕರಾಲ್: ಭಾರತದ ಮೊದಲ ಮಹಿಳಾ ಪೈಲಟ್‌‌ ಜನ್ಮದಿನಕ್ಕೆ ವಿಶೇಷ ಡೂಡಲ್‌

ಪ್ರಜಾವಾಣಿ ವೆಬ್‌‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

Google

ಬೆಂಗಳೂರು: ಭಾರತದ ಮೊದಲ ಮಹಿಳಾ ಪೈಲಟ್‌ ಸರಲಾ ಠಕರಾಲ್ ಅವರ 107ನೇ ಜನ್ಮದಿನದ ಅಂಗವಾಗಿ ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವ ಸಲ್ಲಿಸಿದೆ.

ಠಕರಾಲ್ ಅವರು 1914 ಆಗಸ್ಟ್‌ 8ರಂದು ದಿಲ್ಲಿಯಲ್ಲಿ ಜನಿಸಿದರು. ಪ್ರಸ್ತುತ ಪಾಕಿಸ್ತಾನದಲ್ಲಿರುವ ಲಾಹೋರ್‌ಗೆ ಟಕರಾಲ ವಾಸಸ್ಥಳ ಬದಲಿಸಿಕೊಂಡಿದ್ದರು. ಭಾರತೀಯ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆ ಪಡೆದಿರುವ ಠಕರಾಲ್ ಅವರು ವಿನ್ಯಾಸಕಿ ಮತ್ತು ಉದ್ಯಮಿ.

ಗಂಡನ ಕುಟುಂಬದ ಸ್ಪೂರ್ತಿಯಿಂದ ವಿಮಾನ ಚಾಲನೆ ಕಡೆ ಆಸಕ್ತಿ ಹೊಂದಿದ ಠಕರಾಲ್ 21ನೇ ವಯಸ್ಸಿಗೇ ವಿಮಾನದ ಕಾಕ್‌ಪಿಟ್‌ ಏರಿದ್ದಾರೆ. ಸಾಂಪ್ರದಾಯಿಕ ಸೀರೆಯ ಉಡುಗೆಯಲ್ಲಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದರು.

ವಿಮಾನ ಚಾಲನೆ ಪುರುಷರಿಗೆ ಮಾತ್ರ ಎಂಬಂತಿದ್ದ ವಾತಾವರಣದಲ್ಲಿ ಮಹಿಳೆಯರೂ ವಿಮಾನವನ್ನು ಹಾರಿಸಬಲ್ಲರು ಎಂಬುದನ್ನು ತೋರಿಸಿಕೊಟ್ಟ ಹೆಗ್ಗಳಿಕೆ ಠಕರಾಲ್ ಅವರದ್ದಾಗಿದೆ. ಮೊದಲ ವಿಮಾನ ಚಾಲನೆಯ ಸುದ್ದಿ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಸಾಂಪ್ರದಾಯಿಕ ಸೀರೆ ವಿಶೇಷ ಗಮನ ಸೆಳೆದಿತ್ತು.

'ಕಳೆದ ವರ್ಷ ಸರಲಾ ಠಕರಾಲ್ ಅವರ ಡೂಡಲ್‌ಅನ್ನು ಪ್ರಕಟಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದೆವು. ಆದರೆ ಕೇರಳದಲ್ಲಿ ನಡೆದ ವಿಮಾನ ದುರಂತದಿಂದ ಡೂಡಲ್‌ ಪ್ರಕಟಣೆಯನ್ನು ತಡೆ ಹಿಡಿದಿದ್ದೆವು. ರಕ್ಷಣಾ ಕಾರ್ಯಾಚರಣೆಗೆ ತೊಡಗಿಸಿಕೊಂಡವರಿಗೆ ಗೌರವ ನೀಡುವ ನಿಟ್ಟಿನಲ್ಲಿ ಸರಲಾ ಡೂಡಲ್‌ಅನ್ನು ಪ್ರಕಟಿಸಿರಲಿಲ್ಲ. ಸಾಮಾನ್ಯವಾಗಿ ಒಂದಕ್ಕಿಂತ ಹೆಚ್ಚು ಬಾರಿ ಡೂಡಲ್‌ಅನ್ನು ನಾವು ಪ್ರಕಟಿಸುವುದಿಲ್ಲ. ವಿಮಾನ ಚಾಲನೆಯಲ್ಲಿ ಮಹಿಳೆಯರಿಗೆ ಸ್ಪೂರ್ತಿ ನೀಡಿದ ಸರಲಾ ಅವರ 107ನೇ ಜನ್ಮದಿನದಂದು ಡೂಡಲ್‌ ಪ್ರಕಟಿಸಲು ನಿರ್ಧರಿಸಿದ್ದೆವು' ಎಂದು ಗೂಗಲ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು