ಗುರುವಾರ , ಏಪ್ರಿಲ್ 15, 2021
22 °C

ರಸ್ತೆ ನಿರ್ಮಾಣ ಹಂತದಲ್ಲೇ ಕೇಬಲ್ ಅಳವಡಿಕೆ‌ ಕಡ್ಡಾಯಗೊಳಿಸಿ: ‘ಸುಪ್ರೀಂ‘ಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಇತರ ರಸ್ತೆಗಳಲ್ಲಿ ಪದೇ ಪದೇ ಅಗೆಯುವುದು ಹಾಗೂ ಆರ್ಥಿಕ ಹೊರೆಯನ್ನು ತಪ್ಪಿಸಲು ರಸ್ತೆ ನಿರ್ಮಾಣ ಹಂತದಲ್ಲಿಯೇ ಎಲ್ಲಾ ರೀತಿಯ ಉಪಯೋಗಕ್ಕೆ ಅನುಕೂಲವಾಗುವಂತೆ ಸಾಮಾನ್ಯ ಕೇಬಲ್‌ವೊಂದನ್ನು ಕಡ್ಡಾಯವಾಗಿ ಆಳವಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ತಿಳಿಸಿದೆ. 

‘ಇದು ಉತ್ತಮ ಆಲೋಚನೆ‘ ಎಂದು ಶ್ಲಾಘಿಸಿರುವ ಮುಖ್ಯನ್ಯಾಯಮೂರ್ತಿ ಎಸ್‌. ಎ. ಬೊಬಡೆ, ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಹಾಗೂ ವಿ.ರಾಮಸುಬ್ರಹ್ಮಣಿಯಂ ಅವರನ್ನೊಳಗೊಂಡ ಪೀಠವು, ಕೇಂದ್ರ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಇತರರಿಗೆ ನೋಟಿಸ್ ಜಾರಿ ಮಾಡಿದೆ. 

ಹರಿಪ್ರಿಯಾ ಪಟೇಲ್‌ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ ಅವರ ಮನೆ ರಾಷ್ಟ್ರೀಯ ಹೆದ್ದಾರಿ 10ರಲ್ಲಿದ್ದು, ಹೆದ್ದಾರಿಗಳಲ್ಲಿ ಪದೇ ಪದೇ ರಸ್ತೆ ರಿಪೇರಿ, ಅಗೆಯುವುದು, ಗುಂಡಿ ತೋಡುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿರುತ್ತವೆ. ಸಂಚಾರ ಅಸ್ತವ್ಯಸ್ತ ಆಗುತ್ತದೆ. ಸಾರ್ವಜನಿಕ ಹಣವೂ ಪೋಲು ಎಂದು ಹೇಳಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು