ಬುಧವಾರ, ಜೂನ್ 23, 2021
29 °C

ಕೋರ್ಟ್‌ ಕಲಾಪ ಭೌತಿಕವಾಗಿ ಆರಂಭ: ‘ಸುಪ್ರೀಂ’ನಿಂದ ಒಂದೆರಡು ದಿನದಲ್ಲಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಕೋರ್ಟ್‌ಗಳ ಕಲಾಪವನ್ನು ಭೌತಿಕವಾಗಿ ಆರಂಭಿಸುವ ಕುರಿತಂತೆ ಸುಪ್ರೀಂಕೋರ್ಟ್‌ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ.

ಸುಪ್ರೀಂಕೋರ್ಟ್‌ನ ಏಳು ಜನ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು ವಕೀಲರ ಸಂಘಗಳ ಪ್ರತಿನಿಧಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ನಭೆ ನಡೆಸಿದೆ. ವೈದ್ಯರ ಸಲಹೆಯನ್ನು ಪಡೆದು, ಕಲಾಪಗಳನ್ನು ಭೌತಿಕವಾಗಿಯೇ ನಡೆಸಲು ಅನುಮತಿ ನೀಡುವಂತೆ ವಕೀಲರು ಸಭೆಗೆ ಮನವಿ ಮಾಡಿದರು. 

ನ್ಯಾಯಾಧೀಶರ ಸಮಿತಿಯ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಎನ್‌.ವಿ.ರಮಣ, ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಶನ್‌ನ ಅಧ್ಯಕ್ಷ ದುಷ್ಯಂತ್‌ ದವೆ, ಬಾರ್‌ಕೌನ್ಸಿಲ್‌ ಆಫ್‌ ಇಂಡಿಯಾದ ಚೇರಮನ್‌ ಮನನ್‌ ಕುಮಾರ್‌ ಮಿಶ್ರಾ, ಹಿರಿಯ ವಕೀಲ ಶಿವಾಜಿ ಎಂ.ಜಾಧವ್‌ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು