ಶನಿವಾರ, ನವೆಂಬರ್ 28, 2020
18 °C

ಮುಂಬೈನಲ್ಲಿ ಶಾಲೆ-ಕಾಲೇಜುಗಳ ಪುನರಾರಂಭ ಡಿಸೆಂಬರ್ 31ಕ್ಕೆ ಮುಂದೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಬೆನ್ನಲ್ಲೇ ದೇಶದ ವಾಣಿಜ್ಯ ನಗರಿಯಲ್ಲಿ ಶಾಲಾ-ಕಾಲೇಜುಗಳ ಪುನರಾರಂಭವನ್ನು ಡಿಸೆಂಬರ್ 31ರವರೆಗೆ ಮುಂದೂಡಲಾಗಿದೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಶುಕ್ರವಾರ ತಿಳಿಸಿದೆ. ಈ ಹಿಂದೆ ನವೆಂಬರ್ 23ರಿಂದ ಶಾಲೆಗಳನ್ನು ತೆರೆಯಲು ತೀರ್ಮಾನಿಸಲಾಗಿತ್ತು.

ಸ್ಥಳೀಯ ಪರಿಸ್ಥಿತಿ ಮತ್ತು ಈಗಿರುವ ಸಾಂಕ್ರಾಮಿಕ ರೋಗದ ಪರಿಸ್ಥಿತಿಯನ್ನು ಪರಿಗಣಿಸಿ ಮಹಾರಾಷ್ಟ್ರದ ಇತರ ನಗರಗಳಲ್ಲಿನ ಶಾಲೆಗಳು ವೇಳಾಪಟ್ಟಿಯ ಪ್ರಕಾರ ಮತ್ತೆ ತೆರೆಯಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರೊನಾ ವೈರಸ್ ಸೋಂಕಿನಿಂದಾಗಿ ಮಾರ್ಚ್‌ನಿಂದ ಮುಚ್ಚಿರುವ ಮಹಾರಾಷ್ಟ್ರದ ಶಾಲೆಗಳು ದೀಪಾವಳಿ-ರಜಾದಿನಗಳ ನಂತರ ನವೆಂಬರ್ 23 ರಿಂದ 9 ರಿಂದ 12ನೇ ತರಗತಿಗಳಿಗೆ ಮತ್ತೆ ತೆರೆಯಲು ನಿರ್ಧರಿಸಲಾಗಿತ್ತು.

'ನಗರದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗದ ನಡುವೆ ಕೆಲವು ಶಾಲೆಗಳನ್ನು ಸೋಂಕು ಪರೀಕ್ಷೆ ಮತ್ತು ಕ್ವಾರಂಟೈನ್ ಕೇಂದ್ರಗಳನ್ನಾಗಿ ಬಳಸಲಾಗುತ್ತಿತ್ತು.

'ಸೋಂಕು ಮತ್ತಷ್ಟು ಹರಡುವುದನ್ನು ತಡೆಗಟ್ಟಲು, ಡಿಸೆಂಬರ್ 31 ರವರೆಗೆ ಶಾಲೆಗಳನ್ನು ಮುಚ್ಚಲು ನಾವು ನಿರ್ಧರಿಸಿದ್ದೇವೆ' ಎಂದು ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.

ಏಪ್ರಿಲ್‌ನಿಂದೀಚೆಗೆ ನವೆಂಬರ್ 16 ರಂದು 409 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾದ ಬಳಿಕ, ನಗರದಲ್ಲಿ ನವೆಂಬರ್ 17, 18 ಮತ್ತು 19ರಂದು ಕ್ರಮವಾಗಿ 541, 871 ಮತ್ತು 924 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ.

ಸ್ಥಳೀಯ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ರಾಜ್ಯದ ಇತರ ಭಾಗಗಳಲ್ಲಿನ ಶಾಲೆಗಳನ್ನು ನವೆಂಬರ್ 23 ರಿಂದ ಮತ್ತೆ ತೆರೆಯಬಹುದಾಗಿದೆ ಎಂದು ಶಾಲಾ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು