ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ನಾಯಿಗಳನ್ನು ಅಸ್ಸಾಂಗೆ ಕಳಿಸಿ, ಅಲ್ಲಿ ಚಪ್ಪರಿಸಿಕೊಂಡು ತಿಂತಾರೆ! ಮಹಾ ಶಾಸಕ

Last Updated 7 ಮಾರ್ಚ್ 2023, 13:42 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರದಾದ್ಯಂತ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದರಿಂದ ಈ ವಿಷಯವನ್ನು ಅಧಿವೇಶನದಲ್ಲಿ ಚರ್ಚೆಗೆ ಎತ್ತಿಕೊಳ್ಳಲಾಗಿತ್ತು.

ಈ ವೇಳೆ ಪಕ್ಷೇತರ ಶಾಸಕ ಓಂಪ್ರಕಾಶ್ ಬಾಬುರಾವಂ ಕಾಡು (ಬಚ್ಚು ಕಾಡು) ಅವರು ಮಾತನಾಡಿ, ಮಹಾರಾಷ್ಟ್ರದ ಬೀದಿನಾಯಿಗಳೆಲ್ಲವನ್ನು ಹಿಡಿದು ಅಸ್ಸಾಂಗೆ ಬಿಡಿ. ಅಲ್ಲಿ ನಾಯಿಗಳ ಮಾಂಸಕ್ಕೆ ತುಂಬಾ ಬೇಡಿಕೆ ಇದೆ. ಚಪ್ಪರಿಸಿಕೊಂಡು ತಿಂತಾರೆ ಎಂದು ಹೇಳಿದ್ದಾರೆ.

ಶಾಸಕರಾದ ಪ್ರತಾಪ್ ಸಾರಾನಾಯಿಕ್ ಹಾಗೂ ಅತುಲ್ ಭಟ್ಕಳಕರ್ ಅವರು ಬೀದಿ ನಾಯಿಗಳ ಸಮಸ್ಯೆಗೆ ಮಹಾರಾಷ್ಟ್ರ ಸರ್ಕಾರ ಶಾಶ್ವತವಾದ ಪರಿಹಾರ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.

ಈ ವೇಳೆ ಓಂಪ್ರಕಾಶ್ ಅವರು ಆವೇಶದಲ್ಲಿ ಬೀದಿನಾಯಿಗಳನ್ನು ಅಸ್ಸಾಂಗೆ ಕಳಿಸಬೇಕು. ಅಲ್ಲಿನ ಜನ ಮಾಂಸ ಪ್ರಿಯರು. ಒಂದು ಬಲಿತ ನಾಯಿ ₹8000 ದಿಂದ ₹9000ಕ್ಕೆ ಮಾರಾಟವಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಬಚ್ಚು ಅವರ ಈ ಸಲಹೆಯನ್ನು ಪ್ರಾಣಿ ಧಯಾ ಸಂಘಟನೆಗಳು ವಿರೋಧಿಸಿವೆ.

ಆದರೆ, ಇದಕ್ಕೆ ಸ್ಪೀಕರ್ ಸಹಮತ ಸೂಚಿಸಲಿಲ್ಲ. ಈ ಕುರಿತು ಇಂಡಿಯಾ ಟುಡೇ ವರದಿ ಮಾಡಿದೆ. ಓಂಪ್ರಕಾಶ್ ಬಾಬುರಾವಂ ಕಾಡು ಅವರು ಅತಲಪುರದ ಶಾಸಕರಾಗಿದ್ದಾರೆ.

ಕಳೆದ ತಿಂಗಳು ಹೈದರಾಬಾದ್‌ನಲ್ಲಿ ಬೀದಿನಾಯಿಗಳು 4 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಮಗುವನ್ನು ಕಚ್ಚಿ ಕೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT