ಭಾನುವಾರ, ಏಪ್ರಿಲ್ 11, 2021
21 °C

ಸಿಪಿಐ ಹಿರಿಯ ಮುಖಂಡ ಕುರಿಯನ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಡುಕ್ಕಿ: ಹಿರಿಯ ಸಿಪಿಐ ಮುಖಂಡ, ಟ್ರೇಡ್ ಯೂನಿಯನ್‌ ಸದಸ್ಯ ಮತ್ತು ಕೇರಳದ ವಿಧಾನಸಭೆಯ ಮಾಜಿ ಡೆಪ್ಯುಟಿ ಸ್ಪೀಕರ್ ಸಿ.ಎ. ಕುರಿಯನ್ (88) ಅವರು ವಯೋಸಹಜ ಅನಾರೋಗ್ಯದಿಂದಾಗಿ ಮುನ್ನಾರ್‌ನ ತಮ್ಮ ನಿವಾಸದಲ್ಲಿ ಶನಿವಾರ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿಪಿಐನ ಟ್ರೇಡ್ ಯೂನಿಯನ್ ವಿಭಾಗದ ಎಐಟಿಯುಸಿ ಸಂಘಟನೆಯ ಹಿರಿಯ ಮುಖಂಡರಾದ ಕುರಿಯನ್ ಅವರು, ಪೀರ್ಮೇಡ್ ಕ್ಷೇತ್ರದಿಂದ 1977, 1980 ಮತ್ತು 1996ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 

ಕೋಟಯಂ ಜಿಲ್ಲೆಯ ಪುದುಪಳ್ಳಿಯವರಾದ ಕುರಿಯನ್ ಅವರು, ಬ್ಯಾಂಕ್‌ ಉದ್ಯೋಗವನ್ನು ತ್ಯಜಿಸಿ, ರಾಜಕೀಯ ಪ್ರವೇಶಿಸಿದ್ದರು. 1960 ರಲ್ಲಿ ಟ್ರೇಡ್ ಯೂನಿಯನ್ ಕಾರ್ಯಕರ್ತರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಕುರಿಯನ್ ಅವರು ಕೃಷಿ ಕಾರ್ಮಿಕರ ಹೋರಾಟದಲ್ಲಿ, ಹಲವು ತಿಂಗಳು ಜೈಲುವಾಸ ಅನುಭವಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು