ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆಯಲ್ಲಿ ಆಕ್ಸ್‌ಫರ್ಡ್ ಕೋವಿಡ್–19 ಲಸಿಕೆಯ 2ನೇ ಹಂತದ ಪ್ರಯೋಗ ಇಂದಿನಿಂದ

Last Updated 26 ಆಗಸ್ಟ್ 2020, 7:03 IST
ಅಕ್ಷರ ಗಾತ್ರ

ಮುಂಬೈ: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ (Covishield) ಲಸಿಕೆಯ ಎರಡನೇ ಹಂತದ ಪ್ರಯೋಗವನ್ನು ಪುಣೆ ಮೂಲದ ‘ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ’ ಇಂದು (ಬುಧವಾರ) ಆರಂಭಿಸಲಿದೆ.

ಆರು ಮಂದಿಗೆ ಲಸಿಕೆ ನೀಡಲಾಗುತ್ತದೆ. ಪುಣೆಯ ‘ಭಾರತಿ ವಿದ್ಯಾಪೀಠ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ’ಯಲ್ಲಿ ಪ್ರಯೋಗ ನಡೆಯಲಿದೆ.

‘ಪ್ರಯೋಗಕ್ಕೆ ಮೂವರು ಪುರುಷರು ಮತ್ತು ಮೂವರು ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ಇವರ ಆರೋಗ್ಯ ತಪಾಸಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆರ್‌ಟಿ–ಪಿಸಿಆರ್ ಮತ್ತು ಆ್ಯಂಟಿಬಾಡಿ ಟೆಸ್ಟ್ ನಡೆಸಲಾಗುತ್ತಿದೆ. ವರದಿಗಳು ಪೂರಕವಾಗಿ ಬಂದಲ್ಲಿ ಲಸಿಕೆ ನೀಡಲಾಗುತ್ತದೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸಂಜಯ್ ಲಾಲ್‌ವಾನಿ ತಿಳಿಸಿದ್ದಾರೆ.

ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ ಭಾರತೀಯ ಔಷಧ ನಿಯಂತ್ರಣ ಸಂಸ್ಥೆ (ಡಿಜಿಸಿಐ) ಅನುಮೋದನೆ ನೀಡಿರುವ ಮೂರು ಕೊರೊನಾ ಲಸಿಕೆಗಳಲ್ಲೊಂದಾಗಿದೆ. ಭಾರತದಲ್ಲಿ 100 ಕೋಟಿ ಲಸಿಕೆ ಉತ್ಪಾದಿಸಲು ಅಸ್ಟ್ರಾಜೆನೆಕಾ ಫಾರ್ಮಾಸ್ಯುಟಿಕಲ್ಸ್ ಜತೆಗೆ ಸೆರಂ ಇನ್‌ಸ್ಟಿಟ್ಯೂಟ್‌ ಒಪ್ಪಂದ ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT