ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಸಿಕೆ; ಕ್ಲಿನಿಕಲ್ ಟ್ರಯಲ್ ಪುನರಾರಂಭಕ್ಕೆ ’ಸೀರಂ’ಗೆ ಅನುಮತಿ

ಎರಡು ಮತ್ತು ಮೂರನೇ ಹಂತದ ಪ್ರಯೋಗ
Last Updated 16 ಸೆಪ್ಟೆಂಬರ್ 2020, 5:46 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಗಾದವರಲ್ಲಿ ಕಾಣಿಸಿಕೊಂಡ ಅಡ್ಡಪರಿಣಾಮಗಳಿಂದಾಗಿ ಸ್ಥಗಿತಗೊಳಿಸಿದ್ದ ‌ಆಕ್ಸ್‌ಫರ್ಡ್‌ ಕೋವಿಡ್‌ 19 ಲಸಿಕೆಯ ’ಕ್ಲಿನಿಕಲ್ ಟ್ರಯಲ್‌’ ಅನ್ನು ಪುನರಾರಂಭಿಸಲು ಭಾರತೀಯ ಪ್ರಧಾನ ಔಷಧ ನಿಯಂತ್ರಣ ಸಂಸ್ಥೆಯ (ಡಿಸಿಜಿಐ) ಡಾ. ವಿ.ಜಿ.ಸೊಮಾನಿಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗೆ ಅನುಮತಿ ನೀಡಿದ್ದಾರೆ.

ಇದೇ ವೇಳೆ ಆಕ್ಸ್‌ಫರ್ಡ್‌ ಕೋವಿಡ್ 19 ಲಸಿಕೆಯ ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಡಿಸಿಜಿಐ ಹಿಂದಕ್ಕೆ ಪಡೆದಿದೆ.

ಕ್ಲಿನಿಕಲ್ ಟ್ರಯಲ್ ಪುನರಾರಂಭಿಸುವ ಮುನ್ನ ಸೀರಮ್ ಸಂಸ್ಥೆಗೆ ಕೆಲವೊಂದು ಷರತ್ತನ್ನು ವಿಧಿಸಿದೆ. ಅವುಗಳು ಹೀಗಿವೆ; ಪ್ರಯೋಗಕ್ಕೆ ಒಳಪಡುವ ವ್ಯಕ್ತಿಗಳನ್ನು ಹೆಚ್ಚುವರಿ ನಿಗಾವಹಿಸಿ ಸ್ಕ್ರೀನಿಂಗ್ ಮಾಡಬೇಕು. ಲಸಿಕೆ ನೀಡಿದ ನಂತರ ಫಾಲೋಅಪ್ ಮಾಡುವಾಗ ಅಡ್ಡಪರಿಣಾಮಗಳ ಕುರಿತು ಗಮನ ಹರಿಸಬೇಕು. ಪ್ರಯೋಗಕ್ಕೆ ಒಳಗಾಗುವವರಿಗೆ ನೀಡುವ ತಿಳಿವಳಿಕೆ ಪತ್ರದಲ್ಲಿ ಹೆಚ್ಚಿನ ಮಾಹಿತಿಯನ್ನು ಒದಗಿಸಬೇಕು ಎಂದು ಸಂಸ್ಥೆ ತಿಳಿಸಿದೆ.

ಅಡ್ಡಪರಿಣಾಮ ಉಂಟಾದಂತಹ ಸಂದರ್ಭದಲ್ಲಿ ಶಿಷ್ಟಾಚಾರದ ಪ್ರಕಾರ ಯಾವ ರೀತಿ ನಿರ್ವಹಣೆ ಮಾಡುತ್ತೀರಿ ಎಂಬ ವಿವಿರಗಳನ್ನು ಡಿಸಿಜಿಐ ಕಚೇರಿಗೆ ತಿಳಿಸುವಂತೆ ಸೀರಮ್ ಸಂಸ್ಥೆಗೆ ಸೂಚಿಸಲಾಗಿದೆ.

ವಿದೇಶಗಳಲ್ಲಿ ಲಸಿಕೆ ಪ್ರಯೋಗಕ್ಕೆ ಒಳಪಟ್ಟವರಲ್ಲಿ ಕಾಣಿಸಿಕೊಂಡ ಅಡ್ಡ ಪರಿಣಾಮಗಳಿಂದಾಗಿ,ಆಕ್ಸ್‌ಫರ್ಡ್‌ ಕೋವಿಡ್‌ 19 ಲಸಿಕೆಯನ್ನು ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಬಾರದು ಎಂದು ಡಿಸಿಜಿಐ ಸೆಪ್ಟೆಂಬರ್ 11 ರಂದು ಭಾರತದ ಸೀರಮ್ ಇನ್‌ಸ್ಟಿಟ್ಯೂಟ್‌ಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT