ಶನಿವಾರ, ಮೇ 21, 2022
26 °C

ಬಿಸಿಗಾಳಿಯಲ್ಲಿ ಬೇಯುತ್ತಿದೆ ದೆಹಲಿ: 47 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ ಎರಡು ದಿನಗಳಿಂದ ದೆಹಲಿಯನ್ನು ಸುಡುತ್ತಿರುವ ಬಿಸಿಗಾಳಿಯು ಶನಿವಾರ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ) 'ಆರೆಂಜ್' ಅಲರ್ಟ್ ಘೋಷಿಸಿದೆ. ನಗರದ ಕೆಲವು ಭಾಗಗಳಲ್ಲಿ 46-47 ಡಿಗ್ರಿ ಸೆಲ್ಸಿಯಸ್‌ಗೆ ಏರಬಹುದು ಎಂದೂ ಎಚ್ಚರಿಸಿದೆ.

ದೆಹಲಿಯ ಸಫ್ಥಾರ್ ಜಂಗ್‌ನಲ್ಲಿರುವ ಮೂಲ ಹವಾಮಾನ ಕೇಂದ್ರದಲ್ಲಿ ಶುಕ್ರವಾರ 42.5 ಡಿಗ್ರಿ ಸೆಲ್ಸಿಯಸ್‌ ಇದ್ದ ಗರಿಷ್ಠ ತಾಪಮಾನ ಶನಿವಾರ 44 ಡಿಗ್ರಿ ಸೆಲ್ಸಿಯಸ್‌ಗೆ ಏರಲಿದೆ ಎಂದು ಊಹಿಸಲಾಗಿತ್ತು.

ಶುಕ್ರವಾರ ದೆಹಲಿಯ ನಜಾಫ್‌ಗಡದಲ್ಲಿ ಗರಿಷ್ಠ ತಾಪಮಾನ 46.1 ಡಿಗ್ರಿ ಸೆಲ್ಸಿಯಸ್‌ಗೆ ಏರಿತ್ತು. ಜಾಫರ್‌ ಪುರ ಮತ್ತು ಮುಂಗೇಶಪುರದ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 45.6 ಡಿಗ್ರಿ ಸೆಲ್ಸಿಯಸ್ ಮತ್ತು 45.4 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ. ವರ್ಷದ ಈ ಸಮಯದಲ್ಲಿ ಸಾಮಾನ್ಯಕ್ಕಿಂತ ಆರು ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿದೆ.

ಪಿತಾಂಪುರದಲ್ಲೂ ಬಿಸಿ ಗಾಳಿಯ ಅಬ್ಬರ ಜೋರಾಗಿದ್ದು, 44.7 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದೆ.

ಭಾನುವಾರ ಬಿಸಿಗಾಳಿಯ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮೋಡ ಕವಿದ ವಾತಾವರಣ ಮತ್ತು ಸ್ವಲ್ಪ ಪ್ರಮಾಣದ ಮಳೆ ಮುಂದಿನ ವಾರ ತೀವ್ರವಾದ ಶಾಖದಿಂದ ದೆಹಲಿಗೆ ಸ್ವಲ್ಪ ಪರಿಹಾರ ನೀಡಬಹುದು.

ಇದನ್ನೂ ಓದಿ.. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು