ಬುಧವಾರ, ನವೆಂಬರ್ 25, 2020
21 °C

ಹಿಂದುತ್ವ ಚಳವಳಿಯ ಗೆಲುವು ಭಾರತೀಯ ಕಲ್ಪನೆಯ ಅಂತ್ಯದ ಸೂಚಕ: ಶಶಿ ತರೂರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಹಿಂದುತ್ವ ಚಳವಳಿಯು 1947ರ ಮುಸ್ಲಿಂ ಕೋಮುವಾದದ ಪ್ರತಿಬಿಂಬವಿದ್ದಂತೆ. ಈ ಚಳವಳಿಯ ಗೆಲುವು ಭಾರತೀಯ ಕಲ್ಪನೆಯ ಅಂತ್ಯವನ್ನು ಸೂಚಿಸುತ್ತದೆ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅಭಿಪ್ರಾಯಪಟ್ಟಿದ್ದಾರೆ.

‘ಹಿಂದೂ ಭಾರತವೆಂದರೆ ಅದು ಹಿಂದೂಗಳದ್ದಲ್ಲ. ಅದು ಸಂಘಿ ಹಿಂದುತ್ವ ರಾಷ್ಟ್ರ. ಇದು ಸಂಪೂರ್ಣವಾಗಿ ಭಿನ್ನವಾಗಿರುವ ದೇಶ’ ಎಂದು ತಾವು ಬರೆದಿರುವ ‘ದಿ ಬ್ಯಾಟಲ್ ಆಫ್‌ ಬಿಲಾಂಗಿಂಗ್‌’ ಪುಸ್ತಕದಲ್ಲಿ ತರೂರ್‌ ಹೇಳಿದ್ದಾರೆ.

ಇದನ್ನೂ ಓದಿ: 

ಅಲೆಪ್‌ ಬುಕ್‌ ಕಂಪನಿಯು ಹೊರತಂದಿರುವ ಈ ಪುಸ್ತಕವನ್ನು ಶನಿವಾರ ಬಿಡುಗಡೆಗೊಳಿಸಲಾಯಿತು. 

‘ನನ್ನಂತಹವರು ತಾವು ಪ್ರೀತಿಸುವ ಭಾರತವನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸುತ್ತಾರೆ. ಈ ರಾಷ್ಟ್ರವನ್ನು ನಾವು ದ್ವೇಷಿಸುವ ಹಾಗೆ ಮಾರ್ಪಾಡು ಮಾಡಬೇಡಿ’ ಎಂದು ಅವರು ನುಡಿದಿದ್ದಾರೆ. 

ಹಿಂದುತ್ವ ಸಿದ್ಧಾಂತ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅವರು ಟೀಕಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು