ಮುಂಬೈ: ‘ಮಾಜಿ ಪ್ರಧಾನಿ ದಿ. ಜವಾಹರ್ಲಾಲ್ ನೆಹರು ಅವರು ನಡೆಸಿದ್ದ ದೂರದೃಷ್ಟಿಯ ಆಡಳಿತವು ಇಂದಿನ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ಪಾರು ಮಾಡುತ್ತಿದೆ. ಅವರು ಸಂಪಾದಿಸಿ ಇಟ್ಟಿದ್ದ ರಾಷ್ಟ್ರೀಯ ಸ್ವತ್ತುಗಳನ್ನು ಮಾರಾಟ ಮಾಡುವ ಮೂಲಕ ಇಂದಿನ ಕೇಂದ್ರ ಸರ್ಕಾರ ಮೋಜಿನಲ್ಲಿ ನಿರತವಾಗಿದೆ’ ಎಂದು ಶಿವ ಸೇನಾ ಟೀಕಿಸಿದೆ.

‘ಬಿಜೆಪಿ ಸರ್ಕಾರಕ್ಕೆ ಸೋನಿಯಾ ಗಾಂಧಿ, ರಾಹುಲ್ ಅಥವಾ ಪ್ರಿಯಾಂಕಾ ಜತೆ ಭಿನ್ನಾಭಿಪ್ರಾಯ ಇರಬಹುದು. ಆದರೆ ನೆಹರು ವಿರುದ್ಧ ಯಾಕೆ ದ್ವೇಷ? ನೆಹರು ಅಂದು ಸ್ಥಾಪಿಸಿದ್ದ ಸಂಸ್ಥೆಗಳನ್ನು ಹಣಕ್ಕಾಗಿ ಈಗಿನ ಸರ್ಕಾರ ಮಾರಾಟ ಮಾಡುತ್ತಿದೆ’ ಎಂದು ಶಿವ ಸೇನಾ ಮುಖ್ಯ ವಕ್ತಾರ ಸಂಜಯ್ ರಾವುತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ:ವಿಪಕ್ಷ ನಾಯಕರ ಮೇಲೆ ಒತ್ತಡ ಹೇರಲು ಇ.ಡಿ. ಬಳಕೆ: ಕೇಂದ್ರದ ವಿರುದ್ಧ ಶರದ್ ಕಿಡಿ

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಪ್ರಚಾರಾರ್ಥ ಕೇಂದ್ರ ಶಿಕ್ಷಣ ಸಚಿವಾಲಯವು ‘ಭಾರತೀಯ ಐತಿಹಾಸಿಕ ಸಂಶೋಧನಾ ಸಂಸ್ಥೆಯು (ಐಸಿಎಚ್ಆರ್)’ ಚಿತ್ರಗಳನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ದೇಶದ ಮೊದಲ ಪ್ರಧಾನಿ ನೆಹರು ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಚಿತ್ರಗಳು ಒಳಗೊಂಡಿರಲಿಲ್ಲ. ಇದರ ಬೆನ್ನಲ್ಲೇ ರಾವುತ್ ಅವರು ಕೇಂದ್ರದ ವಿರುದ್ಧ ಹೇಳಿಕೆ ನೀಡಿದ್ದಾರೆ.

‘ನೆಹರು ಅವರು ಅಂದು ರಾಷ್ಟ್ರೀಯ ಸ್ವತ್ತುಗಳನ್ನು ಸ್ಥಾಪಿಸಿ ಇಡದೇ ಇದ್ದಿದ್ದರೆ ಇಂದು ಜನರು ನಿರುದ್ಯೋಗ, ಹಸಿವು, ಅರಾಜಕತೆಯಿಂದ ಬಳಲಬೇಕಾಗುತ್ತಿತ್ತು’ ಎಂದು ರಾವುತ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.