ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಶಿವರಾಜ್ ಸಿಂಗ್ ಚೌಹಾಣ್, ವಿಜಯವರ್ಗಿಯ ಹಾಡಿರುವ ‘ಶೋಲೆ’ ಚಿತ್ರದ ಹಾಡು ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಹಾಡಿರುವ ‘ಶೋಲೆ’ ಚಿತ್ರದ ಹಾಡಿನ ವಿಡಿಯೊ ಬುಧವಾರ ಸಂಜೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ವಿಜಯವರ್ಗಿಯ ಆಯೋಜಿಸಿದ್ದ ಪಾರ್ಟಿಯ ಸಮಯದಲ್ಲಿ ಚಿತ್ರೀಕರಿಸಿದ ವಿಡಿಯೊವನ್ನು ಶಿವರಾಜ್ ಸಿಂಗ್ ಚೌಹಾಣ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ನಾಯಕರು 'ಯೇ ದೋಸ್ತಿ ಹಮ್ ನಹೀ ಛೋಡೆಂಗೆ' ಹಾಡನ್ನು ಹಾಡಿದ್ದಾರೆ,

ಈ ಇಬ್ಬರೂ ನಾಯಕರು ತಮ್ಮ ಬಹುಕಾಲದ ಸ್ನೇಹವನ್ನು ಸೆಲಬ್ರೇಟ್ ಮಾಡುತ್ತಿರುವುದು ವಿಡಿಯೊದಲ್ಲಿ ಕಾಣಬಹುದು. ಬುಧವಾರ ಸಂಜೆ ಇಲ್ಲಿನ ರಾಜ್ಯ ವಿಧಾನಸಭೆಯ ಆವರಣದಲ್ಲಿ ಪಾರ್ಟಿ ನಡೆಯಿತು. 

ಶೋಲೆ ಚಿತ್ರದ ಹಾಡಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‌ನ ಹಿರಿಯ ನಟರಾದ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರಿಗೂ ಚೌಹಾಣ್ ಅವರು ವಿಡಿಯೊ ಟ್ಯಾಗ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು