ನವದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಇಂದು ಪೊಲೀಸರು ಮೆಹ್ರೌಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಕೊಲೆಗೆ ಪ್ರಮುಖ ಸಾಕ್ಷ್ಯಗಳಾದ ಹತ್ಯೆಗೆ ಸಂಬಂಧಿತ ಆಯುಧ , ಶ್ರದ್ಧಾ ಮೊಬೈಲ್ ಮತ್ತು ಕೊಲೆಯಾದ ದಿನ ಧರಿಸಿದ್ದ ಬಟ್ಟೆ ವಶಕ್ಕೆ ಪಡೆಯದಿರುವ ಕುರಿತು ನ್ಯಾಯಾಲಯದಲ್ಲಿ ಪೊಲೀಸರು ಪ್ರಶ್ನೆ ಎದುರಿಸುವ ಸಾಧ್ಯತೆಯಿದೆ. ಪ್ರಮುಖ್ಯ ಸಾಕ್ಷ್ಯಗಳೇ ಲಭ್ಯವಾಗದಿರುವುದು ಪೊಲೀಸರಿಗೆ ವಿಚಾರಣೆಯಲ್ಲಿ ತೀವ್ರ ಹಿನ್ನಡೆ ಉಂಟು ಮಾಡಿದೆ. ಪ್ರಕರಣದ ಸ್ವರೂಪ ದಿನದಿಂದ ದಿನಕ್ಕೆ ಬದಲಾಗುತ್ತಿದೆ.
ಅಫ್ತಾಬ್ ಅಮೀನ್, ಲಿವ್ ಇನ್ ಸಂಬಂಧದಲ್ಲಿದ್ದ ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್ ಕೊಲೆಗೈದು ದೇಹವನ್ನು ಕತ್ತರಿಸಿ 35 ತುಂಡುಗಳಾಗಿಸಿದ್ದ. ದೇಹದ ಭಾಗಗಳನ್ನು ಮೆಹ್ರೌಲಿ ಅರಣ್ಯದ ವಿವಿಧೆಡೆ ಹೂತು ಹಾಕಿದ್ದ. ಶ್ವಾನ ದಳದೊಂದಿಗೆ ಪೊಲೀಸರು ದೇಹದ ಭಾಗಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಶ್ರದ್ಧಾ ರುಂಡಇಲ್ಲಿಯವರೆಗೂಪತ್ತೆಯಾಗಿಲ್ಲ.ಈಗಾಗಲೇ ಪತ್ತೆಯಾಗಿರುವ ದೇಹದ ಭಾಗಗಳು ಶ್ರದ್ಧಾ ತಂದೆಯ ಡಿಎನ್‌ಎಯೊಂದಿಗೆ ತಾಳೆಯಾಗಬೇಕಿದೆ.
ಅಫ್ತಾಬ್ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆತ ತನ್ನ ಹೇಳಿಕೆಯನ್ನು ಪದೇ ಪದೇ ಬದಲಿಸುತ್ತಿದ್ದಾನೆ. ಮೊದಲು ಮಹಾರಾಷ್ಟ್ರದಲ್ಲಿ ಫೋನ್ ಎಸೆದಿರುವುದಾಗಿ ಹೇಳಿದ್ದಾನೆ. ಆದರೆ ಈಗ ದೆಹಲಿಯಲ್ಲೇ ಎಲ್ಲೋ ಬಿಸಾಡಿರುವುದಾಗಿ ಹೇಳುತ್ತಿದ್ದಾನೆ ಎಂದು ಮೂಲಗಳು ಹೇಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.