ಅಜ್ಮೀರ್ ದರ್ಗಾದಲ್ಲಿ ವಾಗ್ವಾದ, ಬಿಗುವಿನ ಸ್ಥಿತಿ

ಜೈಪುರ: ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ಟಿ ಅವರ ಉರುಸ್ ಸಂದರ್ಭದಲ್ಲಿ ಅಜ್ಮೇರ್ ಷರೀಫ್ ದರ್ಗಾ ಖಾದಿಂಗಳು ಮತ್ತು ಇಸ್ಲಾಂನ ಬರೆಲ್ವಿ ವರ್ಗದ ನಡುವೆ ಸೋಮವಾರ ವಾಗ್ವಾದ ಉಂಟಾಗಿದ್ದು, ಕೆಲಹೊತ್ತು ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು.
ದರ್ಗಾದ ಒಳಗೆ ಗುಂಪೊಂದು ಘೋಷಣೆ ಕೂಗಿದ್ದು, ಇದಕ್ಕೆ ಖಾದಿಂಗಳು ಆಕ್ಷೇಪಿಸಿದರು. ಇದು ಘರ್ಷಣೆಗೆ ಕಾರಣವಾಗಿತ್ತು ಎಂದು ದರ್ಗಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅಮರ್ ಸಿಂಗ್ ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.