ಸೋಮವಾರ, ಡಿಸೆಂಬರ್ 5, 2022
25 °C

ಅಲ್‌ ಶಬೀಬ್‌ ಉಗ್ರ ಸಂಘಟನೆ ನಾಯಕನ ಹತ್ಯೆ

ಎಪಿ Updated:

ಅಕ್ಷರ ಗಾತ್ರ : | |

ಮೊಗಾದಿಶು (ಎಪಿ): ಅಲ್‌ ಶಬೀಬ್‌ ಉಗ್ರ ಸಂಘಟನೆಯ ನಾಯಕನನ್ನು ಸೊಮಾಲಿಯಾ ಸೇನೆ ಮತ್ತು ಅಂತರರಾಷ್ಟ್ರೀಯ ಮಿತ್ರ ಸೇನೆಯೊಂದಿಗಿನ ಜಂಟಿ ಕಾರ್ಯಾಚರಣೆ ಮೂಲಕ ಹತ್ಯೆ ಮಾಡಲಾಗಿದೆ ಎಂದು ಸೊಮಾಲಿಯಾ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್‌ ಶಬೀಬ್‌ ಉಗ್ರ ಸಂಘಟನೆಯ ನಾಯಕ ಅಬ್ದುಲ್ಹಾಹಿ ನಾದಿರ್‌ನನ್ನು ಹರಮ್ಕಾ ಪ್ರದೇಶದಲ್ಲಿ ಶನಿವಾರ ಹತ್ಯೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾದಿರ್‌ನ ಸುಳಿವು ನೀಡುವವರಿಗೆ 30 ಲಕ್ಷ ಡಾಲರ್‌ (ಅಂದಾಜು ₹24 ಕೋಟಿ) ಬಹುಮಾನ ಘೋಷಿಸಲಾಗಿತ್ತು. ನಾದಿರ್‌ ಅಬ್‌ ಶಬೀಬ್‌ ಸಂಘಟನೆಯ ಪ್ರಮುಖ ವ್ಯಕ್ತಿ ಎಂದು ಅಮೆರಿಕ ಮತ್ತು ಸೊಮಾಲಿಯಾ ಹೇಳಿದೆ. ಅಲ್‌ ಶಬೀಬ್‌ ಉಗ್ರ ಸಂಘಟನೆಯ ಕುರಿತು ಸೊಮಾಲಿತಾ ಅಧ್ಯಕ್ಷ ಇತ್ತೀಚೆಗೆ ‘ಯುದ್ಧ’ ಸಾರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.