ಶುಕ್ರವಾರ, ಅಕ್ಟೋಬರ್ 22, 2021
22 °C

ಕೊಚ್ಚಿ: ಇಂದು 75 ಟನ್‌ ಏಲಕ್ಕಿಯ ಇ–ಹರಾಜು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಸಾಂಬಾರು ಪದಾರ್ಥಗಳ ಮಂಡಳಿಯು ಭಾನುವಾರ (ಸೆ. 26) ಬೃಹತ್‌ ಪ್ರಮಾಣದ 75 ಟನ್ ಏಲಕ್ಕಿಯ ಇ–ಹರಾಜು ಆಯೋಜಿಸಿದೆ.

ಇಡುಕ್ಕಿಯ ಪುಟ್ಟಡಿಯಲ್ಲಿರುವ ಮಂಡಳಿಯ ಹರಾಜು ಕೇಂದ್ರದಲ್ಲಿ ಇ–ಹರಾಜು ಪ್ರಕ್ರಿಯೆ ನಡೆಯಲಿದೆ.

‘ಸಾಂಬಾರು ಪದಾರ್ಥಗಳ ಮಾರಾಟಗಾರರು ಹಾಗೂ ಬೆಳೆಗಾರರನ್ನು ಹತ್ತಿರ ತರುವ ಉದ್ಧೇಶದಿಂದ ಇ–ಹರಾಜು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸಣ್ಣ ಗಾತ್ರದ ಏಲಕ್ಕಿಯನ್ನು ಹರಾಜು ಹಾಕಲಾಗುವುದು’ ಎಂದು ಮಂಡಳಿಯ ಕಾರ್ಯದರ್ಶಿ ಡಿ.ಸತ್ಯನ್‌ ತಿಳಿಸಿದ್ದಾರೆ.

‘ಸಾಂಬಾರು ಪದಾರ್ಥಗಳನ್ನು ಬೆಳೆಯುವವರಿಗೆ ಉತ್ತಮ ಮಾರುಕಟ್ಟೆ ಒದಗಿಸಿದಂತಾಗುವ ಜೊತೆಗೆ, ಸ್ಪರ್ಧಾತ್ಮಕ ಬೆಲೆಯೂ ಸಿಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು