ಬುಧವಾರ, ಸೆಪ್ಟೆಂಬರ್ 29, 2021
20 °C
ಕೋವಿಡ್ ಮೂರನೇ ಅಲೆ ತಡೆಗಟ್ಟಲು ಸರ್ಕಾರಕ್ಕೆ ನಿರ್ದೇಶನ

ರಾಜಕೀಯ ಸಮಾವೇಶಗಳು ಕಂಡು ಬಂದರೆ ಸುಮ್ಮನಿರುವುದಿಲ್ಲ; ಬಾಂಬೆ ಹೈಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ; 'ಕೋವಿಡ್ ಮೂರನೇ ಅಲೆ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ರಾಜಕೀಯ ಸಮಾವೇಶಗಳು ನಡೆಯದಂತೆ ನೋಡಿಕೊಳ್ಳಬೇಕು' ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ತಾಕೀತು ಮಾಡಿದೆ.

ಕೋವಿಡ್ ಮೂರನೇ ಅಲೆ ತಡೆಗಟ್ಟಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.

ಕೋವಿಡ್ ನಡುವೆಯೂ ಈ ತಿಂಗಳ ಮಧ್ಯಂತರ ಅವಧಿಯಲ್ಲಿ ಮುಂಬೈನಲ್ಲಿ ದೊಡ್ಡ ರಾಜಕೀಯ ಸಮಾವೇಶ ನಡೆಸಲು ಅವಕಾಶ ಕೊಟ್ಟಿದ್ದೇಕೆ? ಎಂದು ನ್ಯಾ, ದೀಪಾಂಕರ್ ದತ್ತಾ ಮತ್ತು ಜಿ.ಎಸ್ ಕುಲಕರ್ಣಿ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ಪ್ರಶ್ನಿಸಿತು.

ನವಿ ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಳಾ ಸಾಹೇಬ್ ಠಾಕ್ರೆ ಅವರ ಹೆಸರನ್ನಿಡಬೇಕು ಎಂದು ಇತ್ತೀಚಿಗೆ ಶಿವಸೇನಾ ನಾಯಕ ಬಿ.ಡಿ ಪಾಟೀಲ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶ ನಡೆದಿತ್ತು.

'ಇನ್ನೂ ವಿಮಾನ ನಿಲ್ದಾಣ ನಿರ್ಮಾಣವಾಗಿಲ್ಲ.ಅದಾಗಲೇ ಜನ ತಮಗೆ ಬೇಕಾದವರ ಹೆಸರು ಇಡಬೇಕು ಎಂದು ರಾಜಕೀಯ ಉದ್ದೇಶದಿಂದ ಬೀದಿಗಿಳಿಯುತ್ತಿರುವುದು ದುರದೃಷ್ಟಕರ. ಕೊನೆ ಪಕ್ಷ ಕೋವಿಡ್ ಹೋಗುವವರೆಗೂ ಕಾಯುವ ತಾಳ್ಮೆ ಇಲ್ಲವಾ? ಎಂದು ಪೀಠ ಪ್ರಶ್ನಿಸಿದೆ.

'ಕೋವಿಡ್ ಇರುವುದರಿಂದ ಯಾವುದೇ ಬೃಹತ್ ರಾಜಕೀಯ ಸಮಾವೇಶ ನಡೆಯಲು ಅವಕಾಶ ಕೊಡಕೂಡದು. ಒಂದು ವೇಳೆ ನಿಮಗೆ (ಸರ್ಕಾರ) ತಡೆಯಲು ಆಗದಿದ್ದರೆ ಹೇಗೆ ತಡೆಯಬೇಕು ಎಂಬುದು ನಮಗೆ ಗೊತ್ತು' ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು