ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಹಜಹಾನ್‌ಪುರ: ಬಿಡಾಡಿ ದನಗಳ ಹಾವಳಿ ತಡೆಯಲು ಗಣತಿ

Last Updated 6 ನವೆಂಬರ್ 2022, 12:50 IST
ಅಕ್ಷರ ಗಾತ್ರ

ಷಹಜಹಾನ್‌ಪುರ, ಉತ್ತರಪ್ರದೇಶ: ರಸ್ತೆ ಅಪಘಾತ ಹಾಗೂ ಬೆಳೆ ಹಾನಿಗೆ ಕಾರಣವಾಗಿರುವ ಬಿಡಾಡಿ ದನಗಳ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಉತ್ತರಪ್ರದೇಶದ ಷಹಜಹಾನ್‌ಪುರ ಜಿಲ್ಲಾಡಳಿತವು ತನ್ನ ವ್ಯಾಪ್ತಿಯ ಪ್ರತಿ ಗ್ರಾಮ ಹಾಗೂ ಮನೆಗಳಲ್ಲಿರುವ ಜಾನುವಾರುಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಗಣತಿಯನ್ನು ನಡೆಸುತ್ತಿದೆ.

‘ಈ ಗಣತಿಯು ಜಾನುವಾರುಗಳ ಸಂಖ್ಯೆಯ ಮಾಹಿತಿಯನ್ನಿರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ, ಹಾಲು ನೀಡುವುದನ್ನು ನಿಲ್ಲಿಸಿದ ಜಾನುವಾರುಗಳನ್ನುಯಾರಾದರೂ ತಮ್ಮ ಮನೆಯಿಂದ ಹೊರಹಾಕಿದ್ದರೆ ಅದನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಜಾನುವಾರುಗಳನ್ನು ಹೊರಹಾಕಿದವರಿಂದ ವಿವರಣೆ ಪಡೆಯಲಾಗುವುದು’ ಎಂದು ಮುಖ್ಯ ಅಭಿವೃದ್ಧಿ ಅಧಿಕಾರಿ ಶ್ಯಾಮ್‌ ಬಹಾದ್ದೂರ್‌ ಸಿಂಗ್‌ ಹೇಳಿದರು.

‘ಷಹಜಹಾನ್‌ಪುರದಲ್ಲಿ 56 ಗೋಶಾಲೆಗಳಿವೆ. ಆದರೆ ಅನೇಕ ಮಂದಿ ಜಾನುವಾರುಗಳನ್ನು ಗೋಶಾಲೆಯಲ್ಲಿ ಬಿಡದೆ, ಬಿಡಾಡಿ ದನಗಳನ್ನಾಗಿ ಮಾಡುತ್ತಿದ್ದಾರೆ. ಗಣತಿ ಸಮೀಕ್ಷೆ ಇನ್ನೂ ಪ್ರಗತಿಯಲ್ಲಿದೆ. ಯಾವುದೇ ಹಸುವನ್ನು ಮನೆಯಿಂದ ಹೊರಹಾಕದಂತೆ ಜಿಲ್ಲೆಯ ಎಲ್ಲ ಗ್ರಾಮಸ್ಥರಿಗೆ ತಿಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT