ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಯಲ್ಲಿ ಹಿರಿಯರಿಗೆ ಸದ್ಯಕ್ಕಿಲ್ಲ ರಿಯಾಯಿತಿ ಪ್ರಯಾಣ: ರೈಲ್ವೆ ಸಚಿವ

ಲೋಕಸಭೆಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಪ್ರತಿಕ್ರಿಯೆ
Last Updated 14 ಡಿಸೆಂಬರ್ 2022, 12:45 IST
ಅಕ್ಷರ ಗಾತ್ರ

ನವದೆಹಲಿ:ರೈಲ್ವೆಯಲ್ಲಿ ರಿಯಾಯಿತಿ ಮತ್ತು ಇತರವೆಚ್ಚಗಳು ತುಂಬಾ ಹೆಚ್ಚಾಗಿದ್ದು, ಹಿರಿಯ ನಾಗರಿಕರಿಗೆ ಪ್ರಯಾಣದಲ್ಲಿ ಸದ್ಯಕ್ಕೆ ಯಾವುದೇ ರಿಯಾಯಿತಿ ಸೌಲಭ್ಯವಿಲ್ಲ ಎಂದು ರೈಲ್ವೆ ಸಚಿವಅಶ್ವಿನಿ ವೈಷ್ಣವ್‌ ಬುಧವಾರ ನೀಡಿದ್ದಾರೆ.

ಲೋಕಸಭೆಯಲ್ಲಿ ಮಹಾರಾಷ್ಟ್ರದ ಪಕ್ಷೇತರ ಸಂಸದ ನವನೀತ್‌ ರಾಣಾ ಅವರುರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ನೀಡುತ್ತಿದ್ದರಿಯಾಯಿತಿ ದರದ ಪ್ರಯಾಣ ಸೌಲಭ್ಯವನ್ನು ಪುನಃ ಕಲ್ಪಿಸಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಈ ಸ್ಪಷ್ಟನೆ ನೀಡಿದ್ದಾರೆ.

ಕೋವಿಡ್‌ 19 ಸಾಂಕ್ರಾಮಿಕದ ಅವಧಿಯಿಂದ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಸದ್ಯ ವೇತನ ಮತ್ತು ಪಿಂಚಣಿ ಹಾಗೂಸಾರ್ವಜನಿಕ ಸಾರಿಗೆ ವೆಚ್ಚಗಳುತುಂಬಾ ಏರಿಕೆಯಾಗಿವೆ. ಕಳೆದ ಬಾರಿ ಪ್ರಯಾಣಿಕರ ಸೌಲಭ್ಯಗಳಿಗೆ ₹59 ಸಾವಿರ ಕೋಟಿ ಸಬ್ಸಿಡಿ ನೀಡಲಾಗಿತ್ತು. ಇದು ಕೆಲವು ರಾಜ್ಯಗಳ ವಾರ್ಷಿಕ ಬಜೆಟ್‌ಗಿಂತಲೂ ದೊಡ್ಡ ಮೊತ್ತವಾಗಿದೆ.ಪಿಂಚಣಿಗೆ ವಾರ್ಷಿಕ ₹60 ಸಾವಿರ ಕೋಟಿ ಮತ್ತು ವೇತನಕ್ಕೆ ₹97 ಸಾವಿರ ಕೋಟಿ ಹಾಗೂ ಇಂಧನಕ್ಕೆ ₹40 ಸಾವಿರ ಕೋಟಿ ವಿನಿಯೋಗವಾಗುತ್ತಿದೆ. ರೈಲ್ವೆಯ ಈಗಿನ ಪರಿಸ್ಥಿತಿ ನೋಡಿಕೊಂಡು ಮುಂದೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಕುಳಿತು ಪ್ರಯಾಣಿಸುವ ಸೌಲಭ್ಯದ ವಂದೇ ಭಾರತ್ ರೈಲುಗಳು ಗರಿಷ್ಠ 500 ರಿಂದ 550 ಕಿ.ಮೀ ದೂರದವರೆಗೆ ಚಲಿಸುತ್ತಿವೆ. ನಿದ್ರಿಸುತ್ತಾ ಪ್ರಯಾಣಿಸಲು ಸ್ಲೀಪರ್‌ ಕೋಚ್‌ ಸೌಕರ್ಯವನ್ನೂ ಕಲ್ಪಿಸಿದ ಮೇಲೆ ಇನ್ನಷ್ಟು ದೂರದ ಮಾರ್ಗದವರೆಗೂ ವಂದೇ ಭಾರತ್‌ ರೈಲುಗಳು ಸಂಚರಿಸಲಿವೆ ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ನಂತರ ಅಯೋಧ್ಯೆಗೆ ದೇಶದ ಮೂಲೆ ಮೂಲೆಯಿಂದಲೂ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಗಳು ಪೂರ್ಣವಾಗಿವೆ. ಸದ್ಯ 41 ಪ್ರಮುಖ ರೈಲು ನಿಲ್ದಾಣಗಳ ಪುನರಾಭಿವೃದ್ಧಿ ನಡೆಯುತ್ತಿದ್ದು, ಉಳಿದ ನಿಲ್ದಾಣಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವರು ಹೇಳಿದರು.

ರೈಲ್ವೆಯು 2030ರೊಳಗೆ ಮಾಲಿನ್ಯ ಮುಕ್ತವೆನಿಸಿಕೊಳ್ಳಲು ‌ಗುರಿ ಹಾಕಿಕೊಂಡಿದ್ದು, ಈ ನಿಟ್ಟಿನಲ್ಲಿ ಕೆಲಸಗಳು ಆರಂಭವಾಗಿವೆ. ಇದರಲ್ಲಿ ಹೈಡ್ರೋಜನ್‌ ಚಾಲಿತ ರೈಲುಗಳ ವಿನ್ಯಾಸ ಮತ್ತು ಅಭಿವೃದ್ಧಿಯೂ ಸೇರಿದೆ. ಇದನ್ನುಭಾರತೀಯ ಎಂಜಿನಿಯರ್‌ಗಳು ಈಗಾಗಲೇ ಪೂರ್ಣಗೊಳಿಸಿದ್ದಾರೆ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT