ಶನಿವಾರ, ಮೇ 15, 2021
23 °C

ಕೋಲ್ಕತ್ತ: 90 ಚಾಲಕರು, ಗಾರ್ಡ್‌ಗಳಿಗೆ ಕೋವಿಡ್‌, 56 ಉಪನಗರ ರೈಲು ಸಂಚಾರ ಸ್ಥಗಿತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಕೋಲ್ಕತ್ತಾದ ಉಪನಗರ ರೈಲುಗಳ 90 ಚಾಲಕರು ಮತ್ತು ಗಾರ್ಡ್‌ಗಳಿಗೆ ‘ಕೋವಿಡ್‌‘ ದೃಢಪಟ್ಟ ಕಾರಣ ಸೀಲ್ಡಾ ವಿಭಾಗದಲ್ಲಿ 56 ಸ್ಥಳೀಯ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಹೌರಾ ವಿಭಾಗದ ರೈಲುಗಳ ಸಂಚಾರ ರದ್ದುಗೊಳಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಂಗಳವಾರ ಪೂರ್ವ ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ: 

‘ಪರಿಸ್ಥಿತಿ ತೀರಾ ಹದಗೆಟ್ಟಿದೆ. 90 ಚಾಲಕರು ಮತ್ತು ಗಾರ್ಡ್‌ಗಳಿಗೆ ಕೋವಿಡ್‌ ದೃಢಪಟ್ಟಿದ್ದು, ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 56 ಉಪನಗರ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಈ ನಿರ್ಧಾರದಿಂದ ಎಕ್ಸ್‌ಪ್ರೆಸ್‌ ಮತ್ತು ಮೇಲ್ ರೈಲುಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ’ ಎಂದು ಪೂರ್ವ ರೈಲ್ವೆ ಇಲಾಖೆಯ ವಕ್ತಾರ ಏಕಲವ್ಯ ಚಕ್ರವರ್ತಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಬೇಡಿಕೆ ಕಡಿಮೆ ಇರುವ ಅವಧಿಯಲ್ಲಿ (ನಾನ್‌ ಪೀಕ್ ಹವರ್‌) ಸಂಚರಿಸುವ ರೈಲುಗಳನ್ನು ರದ್ದುಗೊಳಿಸಿದ್ದು, ಆ ಅವಧಿಯಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ‘ ಎಂದು ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಏಳು ತಿಂಗಳು ಸ್ಥಗಿತಗೊಂಡಿದ್ದ ಉಪನಗರ ರೈಲು ಸೇವೆಗಳು ನವೆಂಬರ್ 11ರಿಂದ ಪುನರಾರಂಭಗೊಂಡಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು