ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಸೌಂದರ್ಯ ವಿವರಿಸುವ ಸುಧಾಮೂರ್ತಿಯ ಹೊಸ ಪುಸ್ತಕ

Last Updated 9 ಆಗಸ್ಟ್ 2021, 11:41 IST
ಅಕ್ಷರ ಗಾತ್ರ

ನವದೆಹಲಿ: ಭೂಮಿಯ ಸೌಂದರ್ಯವನ್ನು ವಿಭಿನ್ನ ಬಗೆಯಲ್ಲಿ ವಿವರಿಸುವ ‍ಪುಸ್ತಕವನ್ನು ಖ್ಯಾತ ಲೇಖಕಿ ಸುಧಾ ಮೂರ್ತಿ ಅವರು ಈ ಬಾರಿ ಬರೆದಿದ್ದಾರೆ.

ಭೂಮಿಯ ಕುರಿತ ಅದ್ಭುತ ಕಥೆಗಳನ್ನು ಈ ಪುಸ್ತಕ ಒಳಗೊಂಡಿದೆ. ‘ಹೌ ದ ಅರ್ಥ್ ಗಾಟ್‌ ಇಟ್ಸ್‌ ಬ್ಯೂಟಿ’ ಶೀರ್ಷಿಕೆಯ ಪುಸ್ತಕವನ್ನು 'ಪೆಂಗ್ವಿನ್ ರ‍್ಯಾಂಡಮ್‌ ಹೌಸ್‌ ಇಂಪ್ರಿಂಟ್‌ ಪಫಿನ್‌' ಪ್ರಕಟಿಸಿದೆ.

ಐದರಿಂದ ಎಂಟು ವರ್ಷದ ಮಕ್ಕಳಿಗಾಗಿ ಈ ಪುಸ್ತಕ ರಚಿಸಲಾಗಿದೆ. ಪುಸ್ತಕದಲ್ಲಿನ ವರ್ಣ ರಂಜಿತ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತವೆ.

‘ಪ್ರವಾಸದ ಸಂದರ್ಭದಲ್ಲಿ ವಿಭಿನ್ನ ರೀತಿಯ ಭೂದೃಶ್ಯಗಳು, ಮಂಜು ಆವರಿಸಿಕೊಂಡಿರುವ ಬೆಟ್ಟಗಳು, ನದಿಗಳ ನಾದ, ಹತ್ತಾರು ಪ್ರಾಣಿಗಳ ಸಂಚಾರ, ಜಲಮೂಲಗಳಲ್ಲಿ ವಾಸಿಸುವ ಜೀವಿಗಳನ್ನು ನೋಡುತ್ತಿದ್ದೆ. ಇವೆಲ್ಲವೂ ಅದ್ಭುತ ಲೋಕ. ಇವುಗಳನ್ನು ಸೃಷ್ಟಿಸಿದ ಕಲಾ ಜಾದೂಗಾರ ಯಾರು? ಇಂತಹ ಭೂಮಿಯನ್ನು ಸೃಷ್ಟಿಸಿದ್ದು ಯಾರು? ಎನ್ನುವ ಕುತೂಹಲ ಮೂಡುತ್ತಿತ್ತು. ನನಗೆ ಬಹಳಷ್ಟು ಆಶ್ಚರ್ಯವಾಗುತ್ತಿತ್ತು. ಇಂತಹ ರಮಣೀಯ ಸೌಂದರ್ಯವೇ ಪುಸ್ತಕ ರೂಪದಲ್ಲಿ ಅನಾವರಣಗೊಂಡಿತು. ನನ್ನ ಯುವ ಓದುಗರ ಜತೆ ನಿಸರ್ಗದ ಅದ್ಭುತ ಸಂಗತಿಗಳನ್ನು ಹಂಚಿಕೊಂಡಿದ್ದೇನೆ‘ ಎಂದು ಸುಧಾಮೂರ್ತಿ ಅವರು ಪುಸ್ತಕದ ಬಗ್ಗೆ ವಿವರಿಸಿದ್ದಾರೆ.

‘ಮಕ್ಕಳಿಗೆ ಸುಂದರವಾದ ಚಿತ್ರಗಳ ಜತೆ ಕಥೆ ಹೇಳುವ ಸನ್ನಿವೇಶವನ್ನು ಈ ಪುಸ್ತಕದಲ್ಲಿ ನಿರೂಪಿಸಲಾಗಿದೆ. ಜನಪ್ರಿಯ ಲೇಖಕರಾಗಿರುವ ಸುಧಾಮೂರ್ತಿ ಅವರು ಮಕ್ಕಳಿಗೆ ವಿಭಿನ್ನ ಶೈಲಿಯಲ್ಲಿ ಕಥೆಗಳನ್ನು ರಚಿಸಿದ್ದಾರೆ. ಕಥೆಗಳ ಜತೆಗಿನ ವರ್ಣರಂಜಿತ ಕಲಾ ಚಿತ್ರಗಳು ಗಮನಸೆಳೆಯುತ್ತವೆ. ಮಕ್ಕಳ ಗ್ರಂಥಾಲಯಕ್ಕೆ ಇದೊಂದು ಅದ್ಭುತ ಪುಸ್ತಕ’ ಎಂದು ಪೆಂಗ್ವಿನ್‌ ರ‍್ಯಾಂಡಮ್‌ ಹೌಸ್‌ನ ಸೊಹಿನಿ ಮಿತ್ರ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT