ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಜಾಕ್ವೆಲಿನ್‌ಗೆ ವಂಚಕ ಸುಖೇಶ್‌ನಿಂದ ಪ್ರೇಮ ಪತ್ರ

Last Updated 25 ಮಾರ್ಚ್ 2023, 20:07 IST
ಅಕ್ಷರ ಗಾತ್ರ

ನವದೆಹಲಿ: ಹಲವಾರು ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಮಾಂಡೋಲಿ ಜೈಲಿನಲ್ಲಿ ಶಿಕ್ಷೆಗೆ ಗುರಿಯಾಗಿರುವ ವಂಚಕ ಸುಖೇಶ್‌ ಚಂದ್ರಶೇಖರ್‌ ಅವರು ತಮ್ಮ ಹುಟ್ಟುಹಬ್ಬದಂದು ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಪ್ರೇಮ ನಿವೇದನೆ ಮಾಡಿದ್ದಾರೆ.

ಜಾಕ್ವೆಲಿನ್‌ ಅವರನ್ನು ಗೊಂಬೆ ಎಂದು ಉಲ್ಲೇಖಿಸಿರುವ ಅವರು, ತಮ್ಮ ಹುಟ್ಟಿದದಿನದಂದು ಅವರನ್ನು ತುಂಬಾ ನೆನೆಪಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

‘ನನ್ನ ಗೊಂಬೆ, ನನ್ನ ಹುಟ್ಟಿದದಿನದಂದು ನೀನು ತುಂಬಾ ನೆನಪಾಗುತ್ತಿದ್ದೀಯ. ನನ್ನ ಬಗ್ಗೆ ನಿನಗಿರುವ ಪ್ರೀತಿ ಕೊನೆಯಿಲ್ಲದ್ದು. ನಿನ್ನ ಹೃದಯದಲ್ಲಿ ಏನಿದೆ ಎಂದು ನನಗೆ ತಿಳಿದಿದೆ. ಅದಕ್ಕೆ ಸಾಕ್ಷಿ ಬೇಡ. ನೀನು ಮತ್ತು ನಿನ್ನ ಪ್ರೀತಿ ನನಗೆ ದೊರೆತಿರುವ ಅತ್ಯಂತ ಅಮೂಲ್ಯ ಉಡುಗೊರೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

ಫೋರ್ಟಿಸ್‌ ಹೆಲ್ತ್‌ಕೇರ್‌ ಪ್ರವರ್ತಕ ಶಿವಿಂದರ್‌ ಮೋಹನ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಸೇರಿ ಹಲವು ಗಣ್ಯರನ್ನು ವಂಚಿಸಿರುವ ಆರೋಪ ಸುಖೇಶ್‌ ಮೇಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT