ಶನಿವಾರ, ಏಪ್ರಿಲ್ 1, 2023
32 °C

ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ– ಬ್ರಿಟನ್ ಪ್ರಧಾನಿ ರಿಷಿ ಸುನಕ್‌ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ರಷ್ಯಾ ಆಕ್ರಮಣದ ನಂತರ ಇದೇ ಮೊದಲ ಬಾರಿಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಬುಧವಾರ ಬ್ರಿಟನ್‌ಗೆ ಭೇಟಿ ನೀಡಿದರು. ಈ ವೇಳೆ ಪ್ರಧಾನಿ ರಿಷಿ ಸುನಕ್‌ ಮತ್ತು ರಾಜ ಚಾರ್ಲ್ಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಬ್ರಿಟನ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಝೆಲೆನ್‌ಸ್ಕಿ, ‘ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೋಲನುಭವಿಸಲಿದೆ. ಯುದ್ಧದ ಆರಂಭದಿಂದ ಈವರೆಗೆ ನಮ್ಮ ಬೆಂಬಲಕ್ಕೆ ನಿಂತ ಬ್ರಿಟನ್‌ ಜನರಿಗೆ ಧನ್ಯವಾದ’ ಎಂದು ಹೇಳಿದರು.

‘ಸ್ವಾತಂತ್ರ್ಯಕ್ಕೇ ಜಯ ಎಂದು ನಮಗೆ ಗೊತ್ತಿದೆ. ರಷ್ಯಾ ಸೋಲನುಭವಿಸಲಿದೆ ಮತ್ತು ಈ ಜಯವು ಇಡೀ ಜಗತ್ತನ್ನು ಬದಲಾಯಿಸಲಿದೆ ಎಂದೂ ತಿಳಿದಿದೆ’ ಎಂದು ಹೇಳಿದರು.

ಪ್ರಧಾನಿ ರಿಷಿ ಸುನಕ್‌ ಮಾತನಾಡಿ, ‘ಉಕ್ರೇನ್‌ನ ಯುದ್ಧ ನೌಕೆ ಮತ್ತು ಯುದ್ಧ‌ ವಿಮಾನಗಳ ಪೈಲಟ್‌ಗಳಿಗೆ ತರಬೇತಿಯನ್ನು ಮುಂದುವರಿಸಲು ಬ್ರಿಟನ್‌ ಬದ್ಧ’ ಎಂದರು.

‘ಝೆಲೆನ್‌ಸ್ಕಿ ಅವರ ಬ್ರಿಟನ್‌ ಭೇಟಿಯು ಅವರ ದೇಶದ ಧೈರ್ಯ, ದೃಢ ನಿರ್ಧಾರ ಮತ್ತು ಹೋರಾಟದ ಕಿಚ್ಚನ್ನು ರುಜುವಾತು ಮಾಡಿದೆ. ಹಾಗೆಯೇ ಉಭಯ ದೇಶಗಳ ನಡುವಿನ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ’ ಎಂದು  ಹೇಳಿದರು.

‘10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ನಡೆದ ಉಭಯ ದೇಶಗಳ ನಾಯಕರ ಸಭೆಯಲ್ಲಿ, ಉಕ್ರೇನ್‌ಗೆ ಬೆಂಬಲ ನೀಡುವ ಬಗ್ಗೆ ಮತ್ತು ರಷ್ಯಾ ವಿರುದ್ಧದ ಹೋರಾಟಕ್ಕೆ ತತ್‌ಕ್ಷಣವೇ ಸೇನಾ ಸಲಕರಣೆಗಳನ್ನು ಕಳುಹಿಸಿಕೊಡುವ ಬಗ್ಗೆ ಚರ್ಚೆ ನಡೆಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು