ಶುಕ್ರವಾರ, ಫೆಬ್ರವರಿ 26, 2021
31 °C

ರೈಲ್ವೆ ಮಂಡಳಿ ನೂತನ ಚೇರಮನ್‌ ಸುನೀತ್‌ ಶರ್ಮಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೈಲ್ವೆ ಮಂಡಳಿಯ ನೂತನ ಚೇರಮನ್‌ ಹಾಗೂ ಸಿಇಒ ಆಗಿ ಸುನೀತ್‌ ಶರ್ಮಾ ಅವರನ್ನು ಗುರುವಾರ ನೇಮಕ ಮಾಡಲಾಗಿದೆ. ಅವರು ಪೂರ್ವ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು.

ಹಾಲಿ ಚೇರಮನ್‌ ವಿ.ಕೆ.ಯಾದವ್ ಅವರ ಸೇವಾವಧಿಯನ್ನು ಕಳೆದ ಜನವರಿಯಲ್ಲಿ ವಿಸ್ತರಿಸಲಾಗಿತ್ತು. 1978ನೇ ಬ್ಯಾಚ್‌ನ ಸ್ಪೇಷಲ್‌ ಕ್ಲಾಸ್‌ ರೈಲ್ವೆ ಅಪ್ರೆಂಟಿಸ್‌ ಅಧಿಕಾರಿಯಾಗಿರುವ ಶರ್ಮಾ ಅವರು ರೈಲ್ವೆ ವಿಭಾಗೀಯ ಕಚೇರಿ, ವರ್ಕ್‌ಶಾಪ್‌ಗಳು,  ಡೀಸೆಲ್‌ ಲೋಕೊ ಶೆಡ್‌ಗಳು ಸೇರಿದಂತೆ ರೈಲ್ವೆಯ ವಿವಿಧ ವಿಭಾಗಗಳಲ್ಲಿ 34 ವರ್ಷ ಸೇವೆ ಸಲ್ಲಿಸಿದ್ದಾರೆ.

ರೈಲ್ವೆ ಕಾರ್ಯಾಗಾರಗಳ ನಿರ್ವಹಣೆ ಕುರಿತು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ  ತರಬೇತಿ ಪಡೆದಿದ್ದಾರೆ ಅಮೆರಿಕದ ಕಾರ್ನಿಗಿ ಮೆಲ್ಲಾನ್‌ ಯೂನಿವರ್ಸಿಟಿ, ಟೆಹರಾನ್‌ಗಳಲ್ಲಿ ಸಹ ತರಬೇತಿ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು