ಸೋಮವಾರ, ಆಗಸ್ಟ್ 8, 2022
21 °C

ಸ್ನಾತಕೋತ್ತರ ವೈದ್ಯ ಕೋರ್ಸ್‌: ಪರೀಕ್ಷೆ ರದ್ದತಿಗೆ ‘ಸುಪ್ರೀಂ’ ನಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪರೀಕ್ಷೆ ಬರೆಯಬೇಕಿರುವ ವೈದ್ಯರು ಕೋವಿಡ್‌ ಕರ್ತವ್ಯದಲ್ಲಿ ನಿರತರಾಗಿದ್ದಾರೆ ಎಂಬ ಕಾರಣಕ್ಕೆ ಸ್ನಾತಕೋತ್ತರ ವೈದ್ಯ ಕೋರ್ಸ್‌ನ ಅಂತಿಮ ಪರೀಕ್ಷೆಗಳನ್ನು ರದ್ದು ಮಾಡಬೇಕು ಅಥವಾ ಮುಂದೂಡಬೇಕು ಎಂದು ವೈದ್ಯಕೀಯ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಸುಪ‍್ರೀಂ ಕೋರ್ಟ್‌ ಹೇಳಿದೆ. 

ಅಂತಿಮ ವರ್ಷದ ಪರೀಕ್ಷೆಗಳ ದಿನಾಂಕ ನಿಗದಿ ಮಾಡುವಾಗ ಕೋವಿಡ್‌ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ವೈದ್ಯಕೀಯ ಪರಿಷತ್‌ (ಎನ್‌ಎಂಸಿ), ವಿಶ್ವವಿದ್ಯಾಲಯಗಳಿಗೆ ಈಗಾಗಲೇ ಸೂಚಿಸಿದೆ ಎಂಬುದನ್ನು ನ್ಯಾಯಾಲಯವು ಉಲ್ಲೇಖಿಸಿದೆ. 

ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಲು ಅಗತ್ಯ ಸಮಯ ನೀಡಬೇಕು ಎಂದು 29 ವೈದ್ಯರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 

‘ಪರೀಕ್ಷೆಗೆ ಸಿದ್ಧರಾಗಲು ಅಗತ್ಯ ಸಮಯ ಎಷ್ಟು ಎಂಬುದು ನಮಗೆ ತಿಳಿದಿಲ್ಲ. ಈ ಸಮಯವನ್ನು ನ್ಯಾಯಾಲಯ ತೀರ್ಮಾನಿಸುವುದು ಹೇಗೆ ಸಾಧ್ಯ? ಪ್ರತಿಯೊಬ್ಬರಿಗೂ ಈ ಸಮಯ ಬೇರೆಯೇ ಆಗಿರಬಹುದು. ಹಾಗಾಗಿ, ಎನ್‌ಎಂಸಿಯ ಸಲಹೆಯಂತೆ ವಿಶ್ವವಿದ್ಯಾಲಯಗಳೇ ಪರೀಕ್ಷೆಯ ಬಗ್ಗೆ ತೀರ್ಮಾನಿಸಲಿ’ ಎಂದು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎಂ.ಆರ್‌. ಶಾ ಅವರ ಪೀಠವು
ಹೇಳಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು