ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವಿದ್ಯಾರ್ಥಿಗಳಲ್ಲಿ ಕೋವಿಡ್‌ ಪತ್ತೆ; ಎರಡು ಪ್ರಾಥಮಿಕ ಶಾಲೆಗಳು ಬಂದ್‌

Last Updated 14 ಮಾರ್ಚ್ 2021, 10:47 IST
ಅಕ್ಷರ ಗಾತ್ರ

ಸೂರತ್‌: ‘ಗುಜರಾತ್‌ನ ಸೂರತ್‌ ನಗರದಲ್ಲಿ ಎರಡು ಪ್ರಾಥಮಿಕ ಶಾಲೆಗಳು ಮತ್ತು ಕಾಲೇಜ್‌ವೊಂದರ 20 ವಿದ್ಯಾರ್ಥಿಗಳಲ್ಲಿ ಕೋವಿಡ್‌ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿಈ ಶಾಲೆಗಳು ಮತ್ತು ಕಾಲೇಜನ್ನು ಎರಡು ವಾರಗಳ ತನಕ ಮುಚ್ಚಲಾಗಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.

‘ಸಿ.ಡಿ ಬಾರ್ಫಿವಾಲಾ ಕಾಲೇಜಿನ 10 ವಿದ್ಯಾರ್ಥಿಗಳಲ್ಲಿ ಕೋವಿಡ್‌ ದೃಢಪಟ್ಟ ಹಿನ್ನೆಲೆಯಲ್ಲಿ ಆ ಕಾಲೇಜನ್ನು 14 ದಿನಗಳ ಕಾಲ ಮುಚ್ಚಲು ಸೂರತ್‌ ನಗರ ಪಾಲಿಕೆಯು(ಎಸ್‌ಎಂಸಿ) ಶನಿವಾರ ನಿರ್ಧರಿಸಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಸೂರತ್‌ನ ಎರಡು ಪ್ರಾಥಮಿಕ ಶಾಲೆಗಳಲ್ಲಿ ಕ್ರಮವಾಗಿ ಆರು ಮತ್ತು ನಾಲ್ಕು ಮಕ್ಕಳಲ್ಲಿ ಶನಿವಾರ ಸೋಂಕು ದೃಢ‍ಪಟ್ಟಿದೆ. ಹಾಗಾಗಿ ಈ ಎರಡೂ ಶಾಲೆಗಳನ್ನು 14 ದಿನಗಳ ಕಾಲ ಮುಚ್ಚುವಂತೆ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.

‘ಗುಜರಾತ್‌ನಲ್ಲಿ ಫೆಬ್ರುವರಿ 2021 ರಂದು ಶಿಕ್ಷಣ ಸಂಸ್ಥೆಗಳನ್ನು ಮರು ತೆರೆಯಲಾಯಿತು. ಈ ಬಳಿಕ ವಿವಿಧ ಶಿಕ್ಷಣ ಸಂಸ್ಥೆಗಳ 118 ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ’ ಎಂದು ಉಪ ಆಯುಕ್ತ(ಆರೋಗ್ಯ) ಡಾ. ಆಶಿಷ್‌ ನಾಯಕ್‌ ಅವರು ತಿಳಿಸಿದರು.

‘ಐದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾದ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಈ ಹಿಂದೆ ಕೇವಲ ಸೋಂಕಿತ ವಿದ್ಯಾರ್ಥಿಗಳ ತರಗತಿಗಳನ್ನು ಸೀಲ್‌ ಮಾಡಲಾಗುತ್ತಿತ್ತು’ ಎಂದು ಅವರು ಹೇಳಿದರು.

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಆದಷ್ಟು ಆನ್‌ಲೈನ್‌ ತರಗತಿಗಳನ್ನು ನಡೆಸಬೇಕು. ಸಾಧ್ಯವಾದಲ್ಲಿ ಕ್ಯಾಂಪಸ್‌ ಅನ್ನು ಮುಚ್ಚಬೇಕು’ ಎಂದು ಎಸ್‌ಎಂಸಿ ಮನವಿ ಮಾಡಿದೆ.

ಸೂರತ್‌ನಲ್ಲಿ ಶನಿವಾರ ಹೊಸದಾಗಿ 188 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 42,259ಕ್ಕೆ ಏರಿಕೆಯಾಗಿದೆ. 40,503 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT