ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ತರಬೇತಿ ಪಡೆಯುತ್ತಿರುವ ಅಫ್ಗಾನಿಸ್ತಾನ ಸೈನಿಕರ ಭವಿಷ್ಯ ಅತಂತ್ರ

Last Updated 17 ಆಗಸ್ಟ್ 2021, 16:40 IST
ಅಕ್ಷರ ಗಾತ್ರ

ನವದೆಹಲಿ: ತಾಲಿಬಾನ್‌ ಉಗ್ರ ಸಂಘಟನೆಯು ಅಫ್ಗಾನಿಸ್ತಾನವನ್ನು ಹಿಡಿತಕ್ಕೆ ಪಡೆದಿರುವುದರಿಂದಾಗಿ, ಭಾರತದಲ್ಲಿ ತರಬೇತಿ ಪಡೆಯುತ್ತಿರುವ ಆ ದೇಶದ 130 ಸೈನಿಕರ ಭವಿಷ್ಯ ಅತಂತ್ರವಾದಂತಾಗಿದೆ.

ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಭಾಗವಾಗಿ, ಭಾರತದ ರಕ್ಷಣಾ ಪಡೆಗಳು ಅಫ್ಗಾನ್‌ ಕೆಡೆಟ್‌ಗಳು ಮತ್ತು ಸೈನಿಕರಿಗೆ ವಿವಿಧ ಮಿಲಿಟರಿ ಕೇಂದ್ರಗಳಲ್ಲಿ ದಶಕದಿಂದಲೂ ಕೌಶಲ್ಯ ವೃದ್ಧಿ ತರಬೇತಿ ನೀಡುತ್ತಿವೆ. ಅಷ್ಟಲ್ಲದೇ ಅಫ್ಗಾನಿಸ್ತಾನದ ರಾಷ್ಟ್ರೀಯ ಸೇನೆಯ ಸಾವಿರಾರು ಸೈನಿಕರು ಭಾರತದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ʼಸೈನಿಕರು ಮತ್ತು ಕೆಡೆಟ್‌ಗಳ ಭವಿಷ್ಯ ಅತಂತ್ರವಾಗಿದೆ. ತರಬೇತಿ ಬಳಿಕ ಸೈನಿಕರನ್ನು ಆ ದೇಶಕ್ಕೆ ವಾಪಸ್‌ ಕರೆಸಿಕೊಳ್ಳಲು ಅನುಮತಿ ನೀಡಲಾಗುತ್ತದೆಯೇ? ಅಥವಾ ಆ ದೇಶಕ್ಕೆ ವಾಪಸ್‌ ಆದ ನಂತರ ಅವರೆಲ್ಲ ಏನು ಮಾಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಏಕೆಂದರೆ ಅಫ್ಗಾನ್‌ನಲ್ಲಿ ಅಧಿಕಾರ ಇದೀಗ ತಾಲಿಬಾನ್‌ ಸಂಘಟನೆ ಕೈಯಲ್ಲಿದೆ. ಒಂದುವೇಳೆ ಇಲ್ಲಿರುವ ಸೈನಿಕರೆಲ್ಲ ತರಬೇತಿ ಮುಗಿಸಿ ಈ ಹಿಂದೆಯೇ ತಮ್ಮ ದೇಶಕ್ಕೆ ಮರಳಿದ್ದರೆ ಅವರು ತಾಲಿಬಾನ್ ವಿರುದ್ಧವೇ ಹೋರಾಡಬೇಕಿತ್ತುʼ ಎಂದೂ ಹೇಳಿವೆ.

ಅಫ್ಗಾನ್‌ನ ಅತಿಹೆಚ್ಚು (80) ಕೆಡೆಟ್‌ಗಳು ಡೆಹ್ರಾಡೂನ್‌ನಲ್ಲಿರುವ ಅಕಾಡೆಮಿಯಲ್ಲಿ ಇದ್ದಾರೆ. ಉಳಿದ 50 ಮಂದಿ ಚೆನ್ನೈ ಮತ್ತು ಖಡಕ್ವಾಸ್ಲಾದಲ್ಲಿರುವ ಅಧಿಕಾರಿಗಳ ತರಬೇತಿ ಅಕಾಡೆಮಿಗಳಲ್ಲಿದ್ದಾರೆ.

ಹಲವು ಅಧಿಕಾರಿಗಳಿಗೆ ಸಂಘಟನೆಗೆ ಸೇರಲು ತಾಲಿಬಾನ್‌ ಅವಕಾಶ ಕಲ್ಪಿಸಿದೆ. ಅದರಂತೆಯೇ, ಭಾರತದಲ್ಲಿ ತರಬೇತಿ ನಿರತ ಸೈನಿಕರಿಗೂ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಆದರೆ, ಅದೂ ಖಚಿತವಲ್ಲ. ಅವೆಲ್ಲವೂ ತಾಲಿಬಾನ್‌ ಮತ್ತು ಅಫ್ಗಾನ್‌ ಬಣಗಳ ನಡುವಿನ ಮಾತುಕತೆಯ ಫಲಿತಾಂಶವನ್ನು ಅವಲಂಬಿಸಿವೆ.

ಅಮೆರಿಕದೊಂದಿಗಿನ ಮೈತ್ರಿಯ ಅಡಿಯಲ್ಲಿ ತಾಲಿಬಾನ್‌ ವಿರುದ್ಧ ಹೋರಾಟ ನಡೆಸಲು ಅಫ್ಗಾನ್‌ ಸೈನಿಕರಿಗೆ ವಿವಿಧ ಅಕಾಡೆಮಿಗಳಲ್ಲಿ ತರಬೇತಿ ನೀಡಲಾಗುತ್ತದೆ.

ಅಫ್ಗಾನ್‌ನಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಲು ಪಣತೊಟ್ಟಿದ್ದ ಅಮೆರಿಕದ ಸೇನೆ ಕಳೆದ 20 ವರ್ಷಗಳಿಂದಲೂ ಆ ದೇಶದಲ್ಲಿ ಬೀಡುಬಿಟ್ಟಿತ್ತು. ಆದರೆ, ಅಮೆರಿಕ ಇತ್ತೀಚೆಗೆ ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಂಡಿತ್ತು. ಇದರ ಬೆನ್ನಲ್ಲೇ ಆಕ್ರಮಣಗಳನ್ನು ಆರಂಭಿಸಿದ್ದ ತಾಲಿಬಾನ್‌ ಉಗ್ರರು ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದಿದ್ದಾರೆ.

ಇವನ್ನೂ ಓದಿ
*ಅಫ್ಗನ್‌ನಲ್ಲಿ 20 ವರ್ಷಗಳ ಸುದೀರ್ಘ ರಕ್ತಸಿಕ್ತ ಅಧ್ಯಾಯ ಅಂತ್ಯಕ್ಕೆ ಬದ್ಧ: ಬೈಡನ್
*ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪಾತ್ರವೇನು? ಇಲ್ಲಿದೆ 20 ವರ್ಷಗಳ ‘ರಕ್ತ ಚರಿತ್ರೆ’
​*
*
​*
*
​*
*ʼಅಫ್ಗಾನಿಸ್ತಾನದ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್‌ ಹೋರಾಟʼ ಎಂದ ಎಸ್‌ಪಿ ಸಂಸದ
*
​*
*​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT