ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13ನೇ ವಯಸ್ಸಿಗೇ 17 ಕಂಪ್ಯೂಟರ್‌ ಪ್ರೊಗ್ರಾಮಿಂಗ್‌ ಲಾಂಗ್ವೆಜ್‌ಗಳನ್ನು ಕಲಿತ ಬಾಲಕ

ಅಕ್ಷರ ಗಾತ್ರ

ಕೊಯಮತ್ತೂರು: 13 ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಪ್ರೊಗ್ರಾಮಿಂಗ್‌ ಲಾಂಗ್ವೆಜ್‌ಗಳನ್ನು ಕಲಿತ ಕಿರಿಯ ವಯಸ್ಸಿನ ಬಾಲಕರಲ್ಲಿ ಇಲ್ಲಿನ ಅರ್ನವ್ ಶಿವರಾಮ್ ಕೂಡ ಒಬ್ಬನಾಗಿದ್ದಾನೆ.

ಈ ಕುರಿತು ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿರುವ ಅರ್ನವ್‌ ಶಿವರಾಮ್‌, ‘ನಾನು 4 ನೇ ತರಗತಿಯಲ್ಲಿದ್ದಾಗ ಕಂಪ್ಯೂಟರ್ ಕಲಿಯಲು ಪ್ರಾರಂಭಿಸಿದೆ. ಪ್ರಮುಖ ಕಂಪ್ಯೂಟರ್‌ ಲಾಂಗ್ವೆಜ್‌ಗಳಾದ ಜಾವಾ ಮತ್ತು ಪೈಥಾನ್ ಸೇರಿದಂತೆ 17 ಪ್ರೊಗ್ರಾಮಿಂಗ್‌ ಲಾಂಗ್ವೆಜ್‌ಗಳನ್ನು ಕಲಿತಿದ್ದೇನೆ’ ಎಂದು ತಿಳಿಸಿದ್ದಾನೆ.

‘13 ನೇ ವಯಸ್ಸಿನಲ್ಲಿ 17 ಕಂಪ್ಯೂಟರ್ ಲಾಂಗ್ವೆಜ್‌ಗಳನ್ನು ಕಲಿತಿದ್ದೇನೆ. ಕಡಿಮೆ ಹೂಡಿಕೆಯಲ್ಲಿ ಆಟೊ-ಪೈಲಟ್‌ಗಾಗಿ ಕೃತಕ ಬುದ್ಧಿಮತ್ತೆಯನ್ನು ತಯಾರಿಸಲು ಯೋಜಿಸುತ್ತಿದ್ದೇನೆ’ ಎಂದು ಅರ್ನವ್‌ ಹೇಳಿಕೊಂಡಿದ್ದಾನೆ.

ಬಾಲಕನಿಗೆ ಪ್ರಮಾಣಪತ್ರ ನೀಡುತ್ತಿರುವ ಫೋಟೊಗಳನ್ನೂ ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT