ಶುಕ್ರವಾರ, ಮೇ 14, 2021
30 °C

Tamil Nadu Election Results: ತಮಿಳುನಾಡು ಫಲಿತಾಂಶ, ಇಲ್ಲಿವೆ ಮುಖ್ಯಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಆಡಳಿತಾರೂಢ ಎಐಎಡಿಎಂಕೆ ಹಾಗೂ ಪ್ರತಿಪಕ್ಷ ಡಿಎಂಕೆ ನಡುವಣ ತೀವ್ರ ಹಣಾಹಣಿಗೆ ಕಾರಣವಾಗಿರುವ ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸುತ್ತಿದೆ, ಗೆದ್ದ ಪ್ರಮುಖರು ಯಾರು, ಸೋತ ಪ್ರಮುಖರು ಯಾರು, ಯಾವ ಕ್ಷೇತ್ರದ ಜನ ಯಾರಿಗೆ ಹೆಚ್ಚು ಮನ್ನಣೆ ನೀಡಿದ್ದಾರೆ? ಮುಖ್ಯಾಂಶಗಳು ಮತ್ತು ಫಲಿತಾಂಶದ ಲೇಟೆಸ್ಟ್ ಅಪ್‌ಡೇಟ್ಸ್ ಇಲ್ಲಿವೆ.

* ಎರಡು ಅವಧಿಯಿಂದ ಪ್ರತಿಪಕ್ಷ ಸ್ಥಾನದಲ್ಲಿರುವ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆಗೆ ಈ ಬಾರಿ ತಮಿಳುನಾಡು ಗದ್ದುಗೆ ಬಹುತೇಕ ಖಚಿತ

* ಡಿಎಂಕೆ ಮೈತ್ರಿಯು 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.

* ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ಗೆ ಕೊಳತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಜಯ. ಇದು ಅವರ ಸತತ ಏಳನೇ ಚುನಾವಣಾ ಗೆಲುವಾಗಿದೆ.

* ವೈಯಕ್ತಿಕ ಮತ್ತು ಪಕ್ಷದ ಗೆಲುವಿಗಾಗಿ ಸ್ಟಾಲಿನ್‌ರನ್ನು ಅಭಿನಂದಿಸಿದ ನಟ ರಜನಿಕಾಂತ್.

* ಕಾಂಗ್ರೆಸ್ ಸಂಸದ ಶಶಿ ತರೂರ್‌ರಿಂದ ಸ್ಟಾಲಿನ್‌ಗೆ ಅಭಿನಂದನೆ.

* ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ನಟ, ಮಕ್ಕಳ್‌ ನೀಧಿ ಮಯಂ (ಎಂಎನ್‌ಎಂ) ಪಕ್ಷದ ಸ್ಥಾಪಕ ಕಮಲ ಹಾಸನ್‌ಗೆ ಗೆಲುವು ಬಹುತೇಕ ಖಚಿತ.

* ಸರ್ವರ್ ಕುಸಿತದಿಂದಾಗಿ ಮತ ಎಣಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ – ಚುನಾವಣಾ ಆಯೋಗ ಮಾಹಿತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು