ಶುಕ್ರವಾರ, ಅಕ್ಟೋಬರ್ 30, 2020
27 °C
ಒಂದಾಗುತ್ತಿರುವ ಭಾರತ ವಿರೋಧಿ ಶಕ್ತಿಗಳು

ಪಾಕಿಸ್ತಾನದಲ್ಲಿ ಉಗ್ರರ ಸೌಲಭ್ಯಗಳು ಭದ್ರವಾಗಿವೆ: ಎನ್‌.ಎಸ್‌. ಜಮ್‌ವಾಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಜಮ್ಮು: ‘ಶತ್ರು ರಾಷ್ಟ್ರಗಳು ಭಾರತದೊಳಗೆ ಶಸ್ತ್ರಾಸ್ತ್ರ ಕಳುಹಿಸಲು ‘ಡ್ರೋನ್‌ ಮಾರ್ಗ’ ಬಳಸುತ್ತಿರುವುದು ದೇಶದ ರಕ್ಷಣೆಯ ದೃಷ್ಟಿಯಿಂದ ಹೊಸ ಸವಾಲಾಗಿದೆ. ಪಾಕಿಸ್ತಾನದಲ್ಲಿ ಉಗ್ರರ ಮೂಲಸೌಲಭ್ಯಗಳು ಈಗಲು ಭದ್ರವಾಗಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ಗಡಿ ಭದ್ರತಾ ಪಡೆಯ ಜಮ್ಮು ಫ್ರಾಂಟಿ ಯರ್‌ನ ಐ.ಜಿ., ಎನ್‌.ಎಸ್‌. ಜಮ್‌ವಾಲ ಹೇಳಿದ್ದಾರೆ.

‘ಶಸ್ತ್ರಾಸ್ತ್ರ ಮತ್ತು ಮಾದಕವಸ್ತುಗಳ ಕಳ್ಳಸಾಗಾಣಿಕೆ, ಗಡಿಯಲ್ಲಿ ಗುಂಡಿನ ಚಕಮಕಿಯಂಥ ಘಟನೆಗಳು ನಡೆ ಯುತ್ತಲೇ ಇವೆ.  ಭಾರತ ವಿರೋಧಿ ಶಕ್ತಿಗಳು ಒಟ್ಟಾಗಿರುವುದು ಮತ್ತು ಡ್ರೋನ್‌ ಮೂಲಕ ಶಸ್ತ್ರಾಸ್ತ್ರಗಳನ್ನು ದೇಶದೊಳಗೆ ಕಳುಹಿಸುತ್ತಿರುವುದು ನಮ್ಮ ಮುಂದಿನ ಹೊಸ ಸವಾಲಾಗಿದೆ. ನಾವು ಎಚ್ಚರದಿಂದಿದ್ದೇವೆ, ಈ ಹೊಸ ಭದ್ರತಾ ಸವಾಲನ್ನು ಸಮರ್ಥವಾಗಿ ಎದುರಿಸುತ್ತೇವೆ’ ಎಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

‘ಡ್ರೋನ್‌ ಮೂಲಕ ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆ ಮಾಡುವ ಪ್ರಯತ್ನಗಳು ಈ ಹಿಂದೆಯೂ ಒಂದೆರ ಡು ಬಾರಿ ನಡೆದಿದ್ದವು. ಅವುಗಳನ್ನು ವಿಫಲಗೊಳಿಸಲಾಗಿದೆ. ಈ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ತಂತ್ರಜ್ಞಾನದ ಸಹಾಯ ಪಡೆಯಲಾಗುತ್ತಿದೆ’ ಎಂದರು.

ಭಾರತ ವಿರೋಧಿ ಶಕ್ತಿಗಳು ಒಂದಾಗುತ್ತಿರುವುದು ಹಾಗೂ ಮಾದಕವಸ್ತುಗಳ ಕಳ್ಳಸಾಗಾಣಿಕೆಗೆ ಖಲಿಸ್ತಾನಿ ಹೋರಾಟಗಾರರು ಪಾಕಿಸ್ತಾನದ ಐಎಸ್‌ಐಗೆ ನೆರವಾಗುತ್ತಿದ್ದಾರೆ ಎಂಬ ವರದಿ ಗಳಗೆ ಪ್ರತಿಕ್ರಿಯೆ ನೀಡುತ್ತಾ, ‘ಭಾರತವಿರೋಧಿ ಶಕ್ತಿಗಳು ಅವಕಾಶ ಸಿಕ್ಕ ಕಡೆಗಳಲ್ಲೆಲ್ಲಾ ಕೈಜೋಡಿಸುತ್ತಿದ್ದಾರೆ. ಈ ಸತ್ಯವನ್ನು ಭದ್ರತಾಪಡೆಗಳು ಅರ್ಥ ಮಾಡಿಕೊಂಡಿವೆ. ಈ ಸವಾಲನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ಉಗ್ರರಿಂದ ಭೂಗತ ಬಂಕರ್ ನಿರ್ಮಾಣ
ಶೋಪಿಯಾನ್:
ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಉಗ್ರರು ಸೇನೆಯಿಂದ ತಪ್ಪಿಸಿಕೊಳ್ಳಲು ರಹಸ್ಯವಾಗಿ ಭೂಗತ ಬಂಕರ್‌ಗಳ ಮೊರೆ ಹೋಗಿದ್ದಾರೆ.ಈ ಹಿಂದೆ ಸ್ಥಳೀಯರ ನಿವಾಸಗಳಲ್ಲಿ ಅಡಗಿಕೊಳ್ಳುತ್ತಿದ್ದ ಉಗ್ರರು, ಈಚೆಗೆ ದಟ್ಟವಾದ ತೋಟಗಳು ಇಲ್ಲವೇ ಸಣ್ಣಹೊಳೆಗಳ ಬಳಿ ಭೂಗತ ಬಂಕರ್ ನಿರ್ಮಿಸಿಕೊಂಡು ಸೇನೆ ಮತ್ತು ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವ ಮಾರ್ಗ ಹುಡುಕಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು