ಕಾಶ್ಮೀರ ಫೈಲ್ಸ್ ರೀತಿ ಮುಸ್ಲಿಮರ ಕೊಲೆ ಬಗ್ಗೆಯೂ ಚಿತ್ರ ನಿರ್ಮಿಸಿ: ಅಧಿಕಾರಿ ಸಲಹೆ

ಭೋಪಾಲ್: 'ದಿ ಕಾಶ್ಮೀರ ಫೈಲ್ಸ್' ನಿರ್ಮಾಣ ಮಾಡಿದ ಚಿತ್ರತಂಡ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಕೊಲೆಗಳ ಬಗ್ಗೆಯೂ ಚಿತ್ರ ನಿರ್ಮಿಸಬೇಕು ಎಂದು ಮಧ್ಯಪ್ರದೇಶದ ಲೋಕೋಪಯೋಗಿ ಇಲಾಖೆಯ ಉಪ ಕಾರ್ಯದರ್ಶಿ ನಿಯಾಝ್ ಖಾನ್ ಅವರು ಸಲಹೆ ನೀಡಿದ್ದಾರೆ. ಅಲ್ಲದೆ ಮುಸ್ಲಿಮರು ಸಹ ಭಾರತದ ನಾಗರಿಕರೇ ಹೊರತು ಕ್ರಿಮಿಗಳಲ್ಲ ಎಂದಿದ್ದಾರೆ.
'ಚಿತ್ರದಿಂದ ಗಳಿಕೆಯಾದ ಎಲ್ಲಾ ಹಣವನ್ನು ಕಾಶ್ಮೀರದಲ್ಲಿ ಬ್ರಾಹ್ಮಣರ ಮಕ್ಕಳ ಶಿಕ್ಷಣ ಮತ್ತು ಮನೆಗಳ ನಿರ್ಮಾಣಕ್ಕಾಗಿ ವರ್ಗಾವಣೆ ಮಾಡಬೇಕು' ಎಂದು ನಿಯಾಝ್ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.
Kashmir Files: ಸತ್ಯವನ್ನು ಒಪ್ಪಿಕೊಳ್ಳಲಾಗದ ನೈತಿಕ ಅಧಃಪತನವೇ?
ಇದಕ್ಕೆ ಪ್ರತಿಕ್ರಿಯಿಸಿರುವ 'ದಿ ಕಾಶ್ಮೀರ ಫೈಲ್ಸ್' ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು , ತಾವು 25ರಂದು ಭೋಪಾಲ್‌ಗೆ ಬರುತ್ತಿದ್ದು ಭೇಟಿಗೆ ಸಮಯಾವಕಾಶ ನೀಡಬೇಕು ಎಂದು ಅಧಿಕಾರಿಗೆ ಕೋರಿದ್ದಾರೆ.
ಅಧಿಕಾರಿಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಸಚಿವ ವಿಶ್ವಾಸ್ ಸಾರಂಗ್ ಅವರು, ಇಂಥ ಹೇಳಿಕೆ ನೀಡಿದ ನಿಯಾಝ್ ಅವರನ್ನು ಉಪ ಕಾರ್ಯದರ್ಶಿ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಭಾರತದಲ್ಲಿ ಮುಸ್ಲಿಮರ ನರಮೇಧದ ಕುರಿತು ಪುಸ್ತಕವನ್ನು ಬರೆಯುತ್ತೇನೆ. ಅದು ಕಾಶ್ಮೀರ ಫೈಲ್ಸ್ ರೀತಿ ಚಿತ್ರ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.