ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನ ಸಚಿವ ಹಿಮಂತ ಬಿಸ್ವಾ ಶರ್ಮಾ ಹತ್ಯೆಗೆ ಪಿತೂರಿ: ಮೂವರ ಬಂಧನ

Last Updated 9 ಮಾರ್ಚ್ 2021, 16:58 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂನ ಸಚಿವ ಮತ್ತು ನಾರ್ಥ್ ಈಸ್ಟ್‌ ಡೆಮಾಕ್ರಟಿಕ್‌ ಅಲಿಯನ್ಸ್‌ (ಎನ್‌ಇಡಿಎ) ಸಂಚಾಲಕ ಹಿಮಂತ ಬಿಸ್ವಾ ಶರ್ಮಾ ಅವರ ಕೊಲೆ ಪಿತೂರಿಗೆ ಸಂಬಂಧಿಸಿದಂತೆ ಮೂರು ಜನರನ್ನು ಬಂಧಿಸಿರುವುದಾಗಿ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗುವಾಹಟಿ ಪೊಲೀಸ್‌ ಕಮಿಷನರ್ ಮುನ್ನಾ ಪ್ರಸಾದ್‌ ಗುಪ್ತಾ ಈ ಕುರಿತು ಮಾಹಿತಿ ನೀಡಿದ್ದು, 'ಕೊಲೆಯ ಪಿತೂರಿಯ ಬಗ್ಗೆ ಮಾಹಿತಿ ಸಿಕ್ಕಿತು, ಕೂಡಲೇ ಆ ಬಗ್ಗೆ ತನಿಖೆ ಆರಂಭಿಸಲಾಯಿತು' ಎಂದಿದ್ದಾರೆ.

'ಕಳೆದ ರಾತ್ರಿ (ಸೋಮವಾರ) ನಾವು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆವು, ಅನಂತರ ಆ ಮೂವರನ್ನೂ ಬಂಧಿಸಿದೆವು ಹಾಗೂ ಕೋರ್ಟ್‌ ಮುಂದೆ ಹಾಜರು ಪಡಿಸಲಾಯಿತು. ಮೂರು ದಿನಗಳ ವರೆಗೂ ಅವರನ್ನು ಪೊಲೀಸ್‌ ಕಸ್ಟಡಿಗೆ ಕೊಡಲಾಗಿದೆ' ಎಂದು ಹೇಳಿದ್ದಾರೆ.

ಮೂವರು ಆರೋಪಿಗಳಲ್ಲಿ ಒಬ್ಬ ಉಲ್ಫಾ ಪರವಾದ ಸಂಘನೆಯ ಉಪಾಧ್ಯಕ್ಷ ಪ್ರದಿಪ್‌ ಗೊಗೊಯಿ ಎಂದು ತಿಳಿಸಿದ್ದಾರೆ.

ಉಳಿದ ಇಬ್ಬರ ಕುರಿತು ಇನ್ನಷ್ಟು ವಿವರ ಸಿಗಬೇಕಿದೆ, ಆದರೆ ಅವರಿಗೂ ಉಲ್ಫಾ ಜೊತೆಗೆ ಸಂಬಂಧ ಇರುವ ಸಾಧ್ಯತೆಯಿದೆ. ತನಿಖೆಯ ನಂತರ ಎಲ್ಲವೂ ಸ್ಪಷ್ಟವಾಗಲಿದೆ' ಎಂದು ಪೊಲೀಸ್‌ ಕಮಿಷನರ್‌ ಗುಪ್ತಾ ಹೇಳಿದ್ದಾರೆ.

ಐಪಿಸಿಯ 120ಬಿ (ಅಪರಾಧ ಪಿತೂರಿ), 121 ಹಾಗೂ ಸೆಕ್ಷನ್‌ 18 ಅಡಿಯಲ್ಲಿ ಮೂವರ ವಿರುದ್ಧ ಆರೋಪ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT